ಸೋಮವಾರ, 26 ಅಕ್ಟೋಬರ್ 2026
Trending

ಸೆ.1 ರಿಂದ ಬದಲಾಗಲಿದೆ ಹಣಕಾಸಿನ ನಿಯಮಗಳು!

Money Rules Changing

ಸೆಪ್ಟೆಂಬರ್‌ 1 ರಿಂದ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವ ಹಲವು ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿದೆ.

Sponsored

ಬ್ಯಾಂಕ್‌ ಎಫ್‌ಡಿ: ಫಿಕ್ಸೆಡ್‌ ಡೆಪಾಸಿಟ್‌ಗಳಿಗೆ ಕುರಿತಂತೆ ಬ್ಯಾಂಕ್‌ಗಳು ಕೆಲವು ಪ್ರಮುಖ ಬದಲಾವಣೆಳನ್ನು ತರುತ್ತಿದೆ. ಮೂರು ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ಬೃಹತ್‌ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಬ್ಯಾಂಕ್‌ಗಳು ಪ್ರತಿದಿನ ಬೆಳಗ್ಗೆ 10.10 ಗಂಟೆಯೊಳಗೆ ತಮ್ಮ ವೆಬ್‌ನಲ್ಲಿ ಪ್ರಕಟ ಮಾಡಬೇಕು. ಇದು ಸಣ್ಣ ಎಫ್‌ಡಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಬೋರ್ಡಿಂಗ್‌ ಪಾಸ್‌ಗಳ ಮೇಲೆ ಸ್ಟಾಂಪಿಂಗ್‌: ಭಾರತದಿಂದ ವಿದೇಶಕ್ಕೆ ಪ್ರಯಾಣ ಮಾಡುವ ವಿಮಾನ ಪ್ರಯಾಣಿಕರಿಗೆ ಇನ್ನು ಮುಂದೆ ಇಮಿಗ್ರೇಷನ್‌ ಕೌಂಟರ್‌ಗಳಲ್ಲಿ ಬೋರ್ಡಿಂಗ್‌ ಪಾಸ್‌ಗಳ ಮೇಲೆ ಭೌತಿಕವಾಗಿ ಸ್ಟಾಂಪಿಂಗ್‌ ಮಾಡುವ ಅಗತ್ಯವಿರುವುದಿಲ್ಲ. ತಮ್ಮ ಮೊಬೈಲ್‌ನಲ್ಲಿ ಎಲೆಕ್ಟ್ರಾನಿಕ್‌ ಬೋರ್ಡಿಂಗ್‌ ಪಾಸ್‌ ತೋರಿಸಿದರೆ ಸಾಕು ಇದರಿಂದ ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ.

ಎಲ್‌ಪಿಜಿ ಇ ಕೆವೈಸಿ: ಆಗಸ್ಟ್‌ 31 ಎಲ್‌ಪಿಜಿ ಸಂಪರ್ಕಕ್ಕಾಗಿ ಇ-ಕೆವೈಸಿ ಪೂರ್ಣ ಮಾಡಲು ಕೊನೆಯ ದಿನಾಂಕವಾಗಿದೆ. ಸೆ.1 ರಿಂದ ಇ=-ಕೆವೈಸಿ ಮಾಡಲು ಅವಕಾಶವಿರುವುದಿಲ್ಲ. ಆಧಾರ್‌ ಬಯೋಮೆಟ್ರಿಕ್‌ ಆಧಾರಿತ ಈ ಪ್ರಕಿಯೆ ಕಡ್ಡಾಯವಾಗಿದ್ದು, ಇದನ್ನು ಪೂರ್ಣ ಮಾಡಬೇಕಿದ್ದು, ಸಬ್ಸಿಡಿ ದರದಲ್ಲಿ ಸಿಲಿಂಡರ್‌ ಸಿಗದೇ ಇರಬಹುದು.

ಸೆ.1 ರಂದು ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ಗಳ ಬೆಲೆ, ವಿಮಾನ ಇಂಧನ ದರಗಳು, ಬ್ಯಾಂಕ್‌ ಎಫ್‌ಡಿ ಬಡ್ಡಿ ದರಗಳು ಮತ್ತು ಎಟಿಎಂ ಬಳಕೆಯ ಶುಲ್ಕಗಳು ಬದಲಾಗುವ ಸಾಧ್ಯತೆಯಿದೆ.