ಬೆಂಗಳೂರಿನಲ್ಲಿ ಫುಟ್ಬಾಲ್ ಪ್ರೇಮಿಗಳಿಗೆ ರಾಜ್ಯ ಸರಕಾರ ಸಿಹಿ ಸುದ್ದಿಯೊಂದನ್ನು ನೋಡಿದೆ. ಫಿಫಾ ವಿಶ್ವಕಪ್ ಪಂದ್ಯಗಳನ್ನು ವೀಕ್ಷಣೆ ಮಾಡಲು ಅನುಕೂಲವಾಗುವಂತೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳನ್ನು ರಾತ್ರಿ 3.30 ರವರೆಗೆ ತೆರೆಯಲು ಅನುಮತಿ ನೀಡಲಾಗಿದೆ. ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಷನ್‌ನ ಮನವಿಗೆ ಸ್ಪಂದಿಸಿ ಸರಕಾರ ಈ ನಿರ್ಧಾರ ಮಾಡಿದೆ.
Sponsoredಇಂದು ನಡೆಯುವ ಸೆಮಿಫೈನಲ್ ಪಂದ್ಯ, ನಾಳೆ ಹಾಗೂ ಜುಲೈ 19 ರಂದು ನಡೆಯುವ ಪಂದ್ಯಗಳಿಗೆ ಮಾತ್ರಿ ಈ ಅನುಮತಿ ನೀಡಲಾಗಿದೆ. ಈ ಕುರಿತು ಸಿಎಂ ಡಿಕೆಶಿ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಹಲವು ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಈಗಾಗಲೇ ದೊಡ್ಡ ಸ್ಕ್ರೀನ್‌ಗಳನ್ನು ಅಳವಡಿಸಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಿದೆ. ತಡರಾತ್ರಿ ಉಳಿಯುವ ಗ್ರಾಹಕರಿಗೆ ಕ್ಯಾಬ್ ವ್ಯವಸ್ಥೆ ಮಾಡಲು ನಿರ್ವಹಣಾ ಮಂಡಳಿಗೆ ಸೂಚಿಸಲಾಗಿದೆ.




