ಭಗವಾನ್ ವಿಠ್ಠಲನ ಆಶೀರ್ವಾದ ಪಡೆಯಲು ಪಂಢರಪುರ ಕ್ಷೇತ್ರಕ್ಕೆ ತೆರಳುವ ಭಕ್ತರಿಗೆ ಸುರಕ್ಷಿತ, ಅನುಕೂಲಕರ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುವ ಉದ್ದೇಶದಿಂದ ವಿಶೇಷ ಬಸ್ ಸೇವೆಗಳನ್ನು ಯೋಜಿಸಲಾಗಿದೆ ಎಂದು ಮಹಾರಾಷ್ಟ್ರ ಸಾರಿಗೆ ಸಚಿವ ಹಾಗೂ ಎಸ್‌ಟಿ (ST) ನಿಗಮದ ಅಧ್ಯಕ್ಷ ಪ್ರತಾಪ್ ಸರ್ನಾಯಕ್ ತಿಳಿಸಿದ್ದಾರೆ.
Sponsored40 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳನ್ನು ಹೊಂದಿರುವ ಗ್ರಾಮಗಳು, ತಮ್ಮ ಹತ್ತಿರದ ಎಸ್‌ಟಿ ಡಿಪೋವನ್ನು ಸಂಪರ್ಕಿಸುವ ಮೂಲಕ ಪಂಢರಪುರಕ್ಕೆ ಮೀಸಲಾದ ಎಸ್‌ಟಿ ಬಸ್ ಸೇವೆಯನ್ನು ಪಡೆಯಬಹದು ಎಂದು ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಹೇಳಿದ್ದಾರೆ.
ಭಕ್ತರ ದಟ್ಟಣೆಯನ್ನು ನಿಯಂತ್ರಣ ಮಾಡಲು ಪಂಢರಪುರ ಮತ್ತು ಅದರ ಸುತ್ತಮುತ್ತ ಒಟ್ಟು ನಾಲ್ಕು ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ಸ್ಥಾಪನೆ ಮಾಡಲಾಗುವುದು. ಈ ವಿಶೇಷ ಬಸ್‌ಗಳಲ್ಲೂ ಸರಕಾರದ ಎಲ್ಲಾ ರಿಯಾಯಿತು ದರಗಳು ಅನ್ವಯವಾಗಲಿದೆ. ಮಹಿಳೆಯರಿಗೆ ಟಿಕೆಟ್ ದರದಲ್ಲಿ ಶೇ 50 ರಷ್ಟು ರಿಯಾಯಿತು ದೊರೆಯಲಿದೆ ಮತ್ತು 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸಂಪೂರ್ಣ ಉಚಿತ ಪ್ರಯಾಣದ ಸೌಲಭ್ಯವಿರಲಿದೆ.
ಈ ಸೌಲಭ್ಯದ ಉಪಯೋಗವನ್ನು ಪಡೆಯಲು ಭಕ್ತರು ತಮ್ಮ ಹತ್ತಿರದ ಎಸ್‌ಟಿ ಡಿಪೋಗಳನ್ನು ಸಂಪರ್ಕಿಸಿ ಮುಂಚಿತವಾಗಿ ನೋಂದಣಿ ಮಾಡಬೇಕೆಂದು ಸಾರಿಗೆ ಸಚಿವ ಪ್ರತಾಪ್ ಸರ್ ನಾಯ್ಕ ಮನವಿ ಮಾಡಿದ್ದಾರೆ.




