ಸೋಮವಾರ, 26 ಅಕ್ಟೋಬರ್ 2026
Trending

ಶಾಸಕ ಹರೀಶ್ ಪೂಂಜಾ ರವರಿಗೆ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬೆಳ್ತಂಗಡಿ ವತಿಯಿಂದ ಗೌರವಾರ್ಪಣೆ

ಬೆಳ್ತಂಗಡಿ : ಆಗಸ್ಟ್ 10 ಇತ್ತೀಚೆಗೆ ರಾಜ್ಯದ ಪ್ರತಿಷ್ಠಿತ ವಾರ್ತಾ ವಾಹಿನಿಗಳಲ್ಲಿ ಒಂದಾದ ಕರ್ನಾಟಕ ಟಿವಿಯವರು ಬೆಳ್ತಂಗಡಿ ತಾಲೂಕಿನ ಹಾಗೂ ಕ್ಷೇತ್ರದ ಸರ್ವಾಗೀಣ ಅಭಿವೃದ್ಧಿಗಾಗಿ ಅವರು ಕೈಗೊಂಡ ಜನಸ್ನೇಹಿ ಕಾರ್ಯಕ್ರಮಗಳನ್ನು ಗುರುತಿಸಿ,ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದ “ಬೆಸ್ಟ್ ಎಂಎಲ್ಎ” ಅವಾರ್ಡ್ ಪಡೆದ ಹಿನ್ನಲೆಯಲ್ಲಿ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜರವರನ್ನು ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬೆಳ್ತಂಗಡಿ ವತಿಯಿಂದ ಗೌರವಾರ್ಪಣೆ ಮತ್ತು ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು.

Sponsored

ಈ ಸಂದರ್ಭದಲ್ಲಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಮಹಮದ್ ರಿಯಾಜ್, ಬೆಳ್ತಂಗಡಿ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಶಿವಪುತ್ರ ಸುಣಗಾರ,ಕಾರ್ಯದರ್ಶಿಗಳಾದ ಶ್ರೀ ಜೋಸೆಫ್, ಸಂಘದ ಪದಾಧಿಕಾರಿಗಳಾದ ಶ್ರೀ ಶಿವಬಾಳು,ಶ್ರೀ ವಿಕಾಸ್ ರಾವ್, ಶ್ರೀ ಮಹೇಂದ್ರ ಪೂಜಾರಿ, ಶ್ರೀ ಸುರೇಶ್, ಶ್ರೀ ನಿರಂಜನ್ ಜೈನ್, ಶ್ರೀಮತಿ ಸುಮತಿ ಪಿ.ಎನ್, ಶ್ರೀ ಸುಧಾಕರ ಶೆಟ್ಟಿ, ಸಂಘದ ನಿಕಟ್ಟ ಪೂರ್ವ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಮೊದಲಾದವರು ಉಪಸ್ಥಿತರಿದ್ದರು

Advertisement
Advertisement
Advertisement