ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧದ ಕಾಕ್ರೋಚ್ ಜನತಾ ಪಾರ್ಟಿ ಹೋರಾಟದಲ್ಲಿ ಸಕ್ರಿಯರಾಗಿದ್ದ ಖ್ಯಾತ ನಟಿ ಶಬಾನಾ ಅಜ್ಮಿ ಅವರಿಗೆ ತೀವ್ರ ಹಂದಿ ಜ್ವರ ಕಾಣಿಸಿಕಂಡಿದೆ.
Sponsoredಈ ಕುರಿತಂತೆ ಅವರ ತಂಡವೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದು, ಶಬಾನಾ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಅವರಿಗೆ ಈಗ 102 ಡಿಗ್ರಿ ಜ್ವರವಿದ್ದು, ಆ ಕಾರಣದಿಂದಾಗಿ ಪ್ರತಿಭಟನೆಯಲ್ಲಿ ಭಾಗಿ ಆಗಲು ಆಗಲಿಲ್ಲ ಅಂತ ಹೇಳಿದ್ದಾರೆ.
ಜಂತರ್ ಮಂತರ್ನಲ್ಲಿ ನಡೆದ ಹೋರಾಟದಲ್ಲಿ ಭಾಗಿ ಆದಾಗಲೇ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೂ ದಾಖಲಿಸಲಾಗಿತ್ತು. ಇದೀಗ ಹಂದಿ ಜ್ವರ ಬಂದಿರೋದು ಪತ್ತೆ ಆಗಿದೆ. ಹಾಗಾಗಿ, ವಿಶ್ರಾಂತಿ ಪಡೆದುಕೊಳ್ಳುವಂತೆ ನಟಿಗೆ ವೈದ್ಯರು ಸೂಚಿಸಿದ್ದಾರೆ.




