ಶನಿವಾರ, 24 ಅಕ್ಟೋಬರ್ 2026

ಸಚಿವ ಸತೀಶ್‌ ಜಾರಕಿಹೊಳಿ ಬಾಮೈದನನ ಮನೆ ಮೇಲೆ ಇಡಿ ದಾಳಿ

ಬೆಳಗಾವಿ, ಜೂ.25: ಇಡಿ ಅಧಿಕಾರಿಗಳು ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಭಾವಮೈದ ಮತ್ತು ಬೆಳಗಾವಿಯ ಅಬಕಾರಿ ಇಲಾಖೆಯ ಹೆಚ್ಚುವರಿ ಉಪ ಆಯುಕ್ತ ಮಂಜುನಾಥ್‌ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿ 24 ಗಂಟೆ ಆದರೂ ಇನ್ನೂ ಶೋಧ ಕಾರ್ಯ ಮುಂದುವರಿದಿದೆ. ಬುಧವಾರ ಬೆಳಿಗ್ಗೆ 5.30 ಕ್ಕೆ ಪ್ರಾರಂಭಗೊಂಡ ದಾಳಿ ಇಂದು ಬೆಳಿಗ್ಗೆ 6 ಗಂಟೆವರೆಗೆ ನಡೆದಿದೆ.

ಮಂಜುನಾಥ್‌ ಮನೆ ಸೇರಿ ರಾಜ್ಯದ ಒಟ್ಟು 10 ಸ್ಥಳಗಳಲ್ಲಿ ಈ ಏಕಕಾಲಿಕ ಕಾರ್ಯಾಚರಣೆ ನಡೆದಿದೆ. ಈ ಸ್ಥಳಗಳಲ್ಲಿ ಆರು, ದಾವಣಗೆರೆ ಮತ್ತು ಮೈಸೂರಿನ ನಗರಗಳೂ ಸೇರಿದೆ. ದಾಳಿ ಸಂದರ್ಭ ಅಧಿಕಾರಿಗಳಿಗೆ ಮಹತ್ವದ ದಾಖಲೆಗಳು, ಬೇನಾಮಿ ಬಾರ್‌ ಪರವಾನಗಿಗಳು, ಅಕ್ರಮ ಆಸ್ತಿ ಪತ್ರಗಳು ಮತ್ತು ಚಿನ್ನಾಭರಣಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಮಂಜುನಾಥ್‌ ಅವರ ಪತ್ನಿಯ ವಿಚಾರಣೆ ಕೂಡಾ ಮಾಡಲಾಗಿದೆ