ಕರ್ನಾಟಕದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ನೋಂದಾಯಿತ ಸಂಘಟನೆಯೇ, ಆದಾಯದ ವಿವರವನ್ನು ಒದಗಿಸಲಿ ಎನ್ನುವ ಹೇಳಿಕೆ ಇರುವಾಗಲೇ ಇದೀಗ ಮತ್ತೋರ್ವ ವ್ಯಕ್ತಿ ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದ್ದಾರೆ. ಉತ್ತರ ಪ್ರದೇಶದ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಆರ್‌ಎಸ್‌ಎಸ್ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಆರ್‌ಎಸ್‌ಎಸ್ ನವರು ನಕಲಿ ಹಿಂದೂಗಳು ಹಾಗೂ ಅವರ ಮೂಲಕ ಬಿಜೆಪಿಯಲ್ಲಿ ಕುಳಿತಿರುವವರು ನಕಲಿ ಹಿಂದೂಗಳು. ಆರ್‌ಎಸ್‌ಎಸ್‌ನವರು ನಕಲಿ ಹಿಂದೂಗಳು ಎಂದು ನೋಂದಾಯಿತರಾಗಿದ್ದಾರೆ. ಸದ್ಯಕ್ಕೆ ಅವರು ನಕಲಿ ಹಿಂದೂಗಳು ಎಂಬುದು ಸಾಬೀತಾಗಿದೆ ಎನ್ನುವ ಹೇಳಿಕೆ ನೀಡಿದ್ದಾರೆ.
ಅಸಲಿ ಹಿಂದೂಗಳು ವೇದ ಹಾಗೂ ಪುರಾಣಗಳನ್ನು ನಂಬುತ್ತಾರೆ. ವೇದ ಹಾಗೂ ಪುರಾಣಗಳಲ್ಲಿ ಏನಾದರೂ ಸಂಶಯವಿದ್ದರೆ ಅದನ್ನು ಗುರುಗಳ ಬಳಿ ಚರ್ಚಿಸಿ ಬಗೆಹರಿಸಿಕೊಳ್ಳುತ್ತಾರೆ. ನಕಲಿ ಹಿಂದೂಗಳು ವೇದ, ಪುರಾಣ ಹಾಗೂ ಇದ್ಯಾವುದನ್ನೂ ಸಹ ನಂಬುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದು, ಆರ್‌ಎಸ್‌ಎಸ್‌ನವರು ಇವುಗಳನ್ನು ಪಾಲಿಸದ ನಕಲಿ ಹಿಂದೂಗಳು ಎಂದು ಹೇಳಿದ್ದಾರೆ.
ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿಗಳ ಈ ಹೇಳಿಕೆ ವೈರಲ್ ಆಗಿದ್ದು, ಆರ್‌ಎಸ್‌ಎಸ್ ಹಿಂಬಾಲಕರು ಸ್ವಾಮೀಜಿ ವಿರುದ್ಧ ಕೆಂಡಕಾರುತ್ತಿದ್ದಾರೆ.
"ಆರೆಸ್ಸೆಸ್ ನವರು ನಕಲಿ ಹಿಂದೂಗಳು…"
"ನಕಲಿ ಹಿಂದೂಗಳು ವೇದ, ಪುರಾಣ ಹಾಗೂ ಗುರುಗಳನ್ನು ನಂಬುವುದಿಲ್ಲ"
"ಇವರು ನೋಂದಾಯಿತ ನಕಲಿ ಹಿಂದೂಗಳಾಗಿದ್ದಾರೆ"
ಉತ್ತರ ಪ್ರದೇಶ: ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಹೇಳಿಕೆ pic.twitter.com/Olt45psOZL
— ವಾರ್ತಾ ಭಾರತಿ | Vartha Bharati (@varthabharati) June 24, 2026




