US: ಗಂಡನಿಗೆ ದುಡಿಮೆ ಇಲ್ಲ ಅಂತ ಡಿವೋರ್ಸ್ – ಹೆಂಡತಿ ಹೋಗ್ತಿದ್ದಂತೆ ಗಂಡನಿಗೆ ಬಂತು, 2, 500 ಕೋಟಿ ಲಾಟ್ರಿ
US: ಮನುಷ್ಯನ ಜೀವನದಲ್ಲಿ ಒಳ್ಳೆಯ ಸಂದರ್ಭ ಕೆಟ್ಟ ಸಂದರ್ಭಗಳು ಯಾವಾಗ ಬಂದೊದಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಗೀತಾ ಅಂತದ್ದೇ ಒಂದು ಘಟನೆ ನಡೆದಿದ್ದು, ತನ್ನ ಗಂಡನಿಗೆ ಯಾವುದೇ ರೀತಿಯ ದುಡಿಮೆ ಇಲ್ಲ, ಆತ ಸಂಪಾದನೆ ಮಾಡುತ್ತಿಲ್ಲ ಎಂದು ಹೆಂಡತಿಯೊಬ್ಬಳು ಡೈವೋರ್ಸ್ ಕೊಟ್ಟಿದ್ದಾಳೆ. ಇದೇನು ದೊಡ್ಡ ವಿಚಾರ ಅಲ್ಲ ಬಿಡಿ. ಆದರೆ ಆಕೆ ಡೈವೋರ್ಸ್ ಕೊಟ್ಟು ಮನೆ ಬಿಟ್ಟು ಹೋಗುತ್ತಿದ್ದಂತೆ ಗಂಡನಿಗೆ 2500 ಕೋಟಿ ಲಾಟರಿ ಹೊಡೆದಿದೆ.. !!
Sponsoredಹೌದು, ಅಮೇರಿಕಾದ ಮೈಕ್ ವೇರ್ಸ್ಕಿ ಮತ್ತು ಐಲೀನ್ ಮುರ್ರೆ ದಂಪತಿಗಳು 15 ವರ್ಷಗಳ ಕಾಲ ಸುದೀರ್ಘ ದಾಂಪತ್ಯ ನಡೆಸಿದ್ದರು. ಹದಿನೈದು ವರ್ಷ ಗಂಡನಿಗೆ ಕೆಲಸವಿಲ್ಲ ಎಂಬ ಕಾರಣಕ್ಕೆ ಆತನನ್ನು ಸಾಕಿದ ಪತ್ನಿ, ಆತನ ಅದೃಷ್ಟ ಸರಿ ಇಲ್ಲ ಎಂದು ವಿಚ್ಛೇದನ ನೀಡಿದ್ದಾಳೆ. ಆದರೆ ಕೆಲವೇ ತಿಂಗಳಲ್ಲಿ ಪತಿ ಬರೋಬ್ಬರಿ 2,500 ಕೋಟಿ ರೂಪಾಯಿ ಮೊತ್ತದ ಲಾಟರಿ ಗೆದ್ದು ಇಡೀ ಜಗತ್ತೇ ಬೆರಗಾಗುವಂತೆ ಮಾಡಿದ್ದಾರೆ. ಇದರೊಂದಿಗೆ ಕೈಬಿಟ್ಟವಳು ಕಣ್ಣರಳಿಸಿ ನೋಡುವಂತೆ ಮಾಡಿದೆ.
ವಿಚಿತ್ರ ಅಂದ್ರೆ ಅಮೆರಿಕಾದ ಕಾನೂನಿನ ಪ್ರಕಾರ ವಿಚ್ಛೇದನವಾದ ನಂತರ ದಂಪತಿಗಳಲ್ಲಿ ಯಾರು ಆರ್ಥಿಕವಾಗಿ ಸದೃಢರಿರುತ್ತಾರೋ ಅವರು ಇನ್ನೊಬ್ಬರಿಗೆ ಜೀವನಾಂಶ ನೀಡಬೇಕಾಗುತ್ತದೆ. ಈ ಪ್ರಕರಣದಲ್ಲಿ ಪತ್ನಿ ಐಲೀನ್ ಅವರೇ ದುಡಿಯುವ ವ್ಯಕ್ತಿಯಾಗಿದ್ದರಿಂದ, ಕೆಲಸವಿಲ್ಲದ ಪತಿ ಮೈಕ್ ಅವರಿಗೆ ಮುಂದಿನ ಐದು ವರ್ಷಗಳ ಕಾಲ ಜೀವನಾಂಶ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ಆದರೆ, ವಿಚ್ಛೇದನ ಪಡೆದ ಐದು ತಿಂಗಳು ಕಳೆಯುವಷ್ಟರಲ್ಲಿ ಮೈಕ್ ವೇರ್ಸ್ಕಿ ಮೆಗಾ ಮಿಲಿಯನ್ಸ್ ಲಾಟರಿಯಲ್ಲಿ 273 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 2,500 ಕೋಟಿ ಮೊತ್ತದ ಬೃಹತ್ ಲಾಟರಿ ಗೆದ್ದರು.
ಮೈಕ್ ಲಾಟರಿ ಗೆಲುವಿನ ನಂತರ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿರುವ ಐಲೀನ್, “ನಾನು ಆತನಿಗೆ ಈಗಲೂ ಜೀವನಾಂಶ ನೀಡುತ್ತಿದ್ದೇನೆ, ಆದರೆ ಆತನಿಗೆ ಈಗ ಅದು ಕೇವಲ ಚಿಲ್ಲರೆ ಕಾಸಿನಂತಾಗಿದೆ” ಎಂದು ಹೇಳಿದ್ದಾರೆ. ಜೊತೆಗೆ, ತನಗೆ ಲಾಟರಿ ಹಣದಲ್ಲಿ ಪಾಲು ಬೇಡ ಆದರೆ ತಾನು ನೀಡುತ್ತಿರುವ ಜೀವನಾಂಶವನ್ನು ನಿಲ್ಲಿಸಿದರೆ ಸಾಕು ಎಂದು ವಿನಂತಿಸಿದ್ದಾರೆ.




