ಶನಿವಾರ, 24 ಅಕ್ಟೋಬರ್ 2026

ಉದ್ಯಮಿಗಳ ಬಳಿ ಹಣಕ್ಕಾಗಿ ಬೇಡಿಕೆ, ಬೆದರಿಕೆ; ಹೇಮಂತ್‌ ಪೂಜಾರಿ ಸಹಚರನ ಬಂಧನ

Image Credit: Udayavani

ಉಡುಪಿ: ಉದ್ಯಮಿಗಳ ಬಳಿ ಹಣ ಬೇಡಿಕೆ ಇಟ್ಟು, ಕೊಲೆ ಬೆದರಿಕೆ ಹಾಕುತ್ತಿದ್ದ ಆರೋಪದಲ್ಲಿ ಭೂಗತ ಪಾತಕಿ ಹೇಮಂತ್‌ ಪೂಜಾರಿ ಸಹಚರನೋರ್ವನನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಯನ್ನು ಕಾಪು ತಾಲೂಕು ಬಡಾ ಎಮಾಳ್‌ ನಿವಾಸಿ ಸುರೇಶ್‌ ಅಮೀನ್‌ (38) ಎಂದು ಗುರುತಿಸಲಾಗಿದೆ.

ಭೂಗತ ಪಾತಕಿ ಹೇಮಂತ ಪೂಜಾರಿ ಉಡುಪಿ ಜಿಲ್ಲೆಯ, ಪಡುಬಿದ್ರೆ, ಶಿರ್ವಾ, ಕಾಪು, ಮಣಿಪಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವ್ಯವಹಾರ ಮಾಡಿಕೊಂಡಿರುವ ಉದ್ದಿಮೆದಾರರನ್ನು ಹಾಗೂ ಗಣ್ಯ ವ್ಯಕ್ತಿಗಳನ್ನು ಗುರಿಯಾಗಿಸಿ ಕೋಟ್ಯಂತರ ರೂಪಾಯಿ ಬೇಡಿಕೆ ಇಡುತ್ತಿದ್ದ. ಪ್ರಕರಣದ ತನಿಖೆ ಮಾಡಿದ ಪೊಲೀಸರು ಹೇಮಂತ್‌ ಪೂಜಾರಿಗೆ ಉದ್ಯಮಿಗಳ ಮೊಬೈಲ್‌ ಸಂಖ್ಯೆ ನೀಡಿ ಸಹಾಯ ಮಾಡುತ್ತಿದ್ದ ಸುರೇಶ್‌ ಅಮೀನ್‌ನನ್ನು ಬಂಧನ ಮಾಡಿದ್ದಾರೆ.

ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಂತರ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ.