ಬೆಂಗಳೂರು: ನೀಟ್ ವಿದ್ಯಾರ್ಥಿಗಳಿಗೋಸ್ಕರ ಕೇಂದ್ರ ಸರಕಾರ ವಿರುದ್ಧ ಪ್ರತಿಭಟನೆ ಮಾಡಿದ ಸಿಜೆಪಿ ಪಕ್ಷದ ನಾಯಕರು ಇದೀಗ ಸದ್ದಿಲ್ಲದೇ ಕರ್ನಾಟಕಕ್ಕೆ ಆಗಮಿಸಿದ್ದಾರೆ. ʼಗ್ರಾಮಗಳಲ್ಲಿನ ಸರಕಾರಿ ಶಾಲೆಗಳನ್ನು ಸುಧಾರಿಸಲು ರಾಷ್ಟ್ರವ್ಯಾಪಿ ಅಭಿಯಾನವನ್ನು ನಡೆಸುವುದಾಗಿ ಘೋಷಿಸಿದೆ. ಈ ಹಿನ್ನೆಲೆ ಸಿಜೆಪಿ ನಾಯಕ ಅಶುತೋಷ್ ರಾಂಕ ಟೀಮ್ ಅಭಿಯಾನದ ಭಾಗವಾಗಿ ಶಾಲೆಗಳಿಗೆ ಭೇಟಿ ನೀಡಿದೆ.
ಸಿಜೆಪಿ ವಕ್ತಾರ ಅಶುತೋಷ್ ರಾಂಕ ಮತ್ತು ತಂಡ ಬೆಂಗಳೂರಿನಲ್ಲಿ ಇಂದು ನಾಲ್ಕು ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಶಾಲೆಯ ಕೊಠಡಿಗಳು, ಶೌಚಾಲಯ ಪರಿಶೀಲನೆ ನಡೆಸಿದೆ.
ಬೆಂಗಳೂರಿನ ಜೆಪಿ ನಗರದ ಜರಗನಹಳ್ಳಿ ಸರಕಾರಿ ಶಾಲೆ, ಯಶವಂತಪುರ ಭಾಗದ ಸರಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಕರ್ನಾಟಕದ ಸರಕಾರಿ ಶಾಲೆಗಳ ಕುರಿತು ಶಿಕ್ಷಣ ಸಚಿವರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಇನ್ನು, ಸಿಜೆಪಿ ಪಕ್ಷದ ನಾಯಕರನ್ನು ಭೇಟಿ ಮಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಯಾವುದೇ ಸರ್ಕಾರಿ ಶಾಲೆಗಳಿಗೆ ಮುಕ್ತವಾಗಿ ಭೇಟಿ ನೀಡಿ, ಯಾವುದೇ ಅನುಮತಿ ಬೇಡ ಎಂದು ಹೇಳಿದ್ದಾರೆ. ಭೇಟಿಗೆ ಸಮಯಾವಕಾಶ ಕೇಳಿದ ಕೂಡಲೇ ಭೇಟಿಗೆ ಅವಕಾಶ ಕೊಟ್ಟ ಮಧು ಬಂಗಾರಪ್ಪೆ ಸಿಜೆಪಿ ಟೀಮ್ ಶ್ಲಾಘಿಸಿದ್ದಾರೆ. ಈ ಬಗ್ಗೆ ಅಶುತೋಷ್ ರಾಂಕ ಅವರು ಶಿಕ್ಷಣ ಸಚಿವರ ಜೊತೆ ಭೇಟಿ ಮತ್ತು ಮಾತುಕತೆ ಬಗ್ಗೆ ಎಕ್ಸ್ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.




