ತಾನು ಅತಿಯಾಗಿ ಹಚ್ಚಿಕೊಂಡಿರುವ, ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಪ್ರಿಯತಮ ಫೋನ್ ಮಾಡದೆ, ಮೆಸೇಜು ಕಳಿಸದೆ ನೆಗ್ಲೆಟ್ ಮಾಡಿದ ಕಾರಣಕ್ಕಾಗಿ ಎರಡು ಮಕ್ಕಳ ಮಹಾತಾಯಿ ಒಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದೆ.
ಬಾಗಲಕೋಟೆಯ (Bagalkot) ಬಾಂಬೆ ಕಾಲೋನಿಯಲ್ಲಿ ನಡೆದಿದೆ. ಮೆಹಬೂಬ್ ಬಿ (27) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಮಹಿಳೆಯ ಯುವಕನೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದು ಕೆಲದಿನಗಳಿಂದ ಆತ ಯಾವುದೇ ರೆಸ್ಪಾನ್ಸ್ ಮಾಡುತ್ತಿರಲಿಲ್ಲ ಹೀಗಾಗಿ ಮನನೊಂದ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಆತ್ಮಹತ್ಯೆಗೂ ಮುನ್ನ ಮಹಿಳೆ ನೇಣು ಬಿಗಿದುಕೊಳ್ಳುತ್ತಿರುವುದನ್ನು ವಿಡಿಯೋ ಮಾಡಿಕೊಂಡು ಪ್ರಿಯಕರನಿಗೆ ಕಳುಹಿಸಿದ್ದಾಳೆ . ಅಲ್ಲದೆ, ಕರೆ ಮಾಡದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಡಿಯೋ ಸಂದೇಶದ ಮೂಲಕವೂ ಎಚ್ಚರಿಕೆ ನೀಡಿದ್ದಳು. ಇಷ್ಟಾದರೂ ಇನ್ನೂ ಯುವಕನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಆಕೆ ತನ್ನ ಮಕ್ಕಳನ್ನು ಕೂಡ ನೋಡದೆ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ. ಸದ್ಯ ಪೊಲೀಸರ ಸ್ಥಳಕ್ಕೆ ಆಗಮಿಸಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



