ಶನಿವಾರ, 24 ಅಕ್ಟೋಬರ್ 2026

ವಾಟ್ಸಾಪ್ ಮೂಲಕವೇ KSRTC ಬಸ್ ಟಿಕೆಟ್ ಬುಕ್ ಮಾಡ್ಬಹುದು, ಹೇಗೆ?

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಡಿಜಿಟಲ್ ಕ್ರಾಂತಿಗೆ ಮುಂದಾಗಿದ್ದು ಇನ್ನು ಮುಂದೆ ಕೆಎಸ್ಆರ್ಟಿಸಿ ಬಸ್ಗಳ ಟಿಕೆಟ್ ವಾಟ್ಸಪ್ ಮೂಲಕ ಬುಕ್ ಮಾಡಬಹುದು ಎಂದು ತಿಳಿಸಿದೆ. ಇದು ಪ್ರಯಾಣಿಕರಿಗೆ ಸರಳ ಮತ್ತು ಸುಲಭ ವಿಧಾನವು ಆಗಿದೆ.

ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ 100 ದಿನ ಪೂರ್ಣ ಹಿನ್ನೆಲೆ ನಡೆದ ಸಂಭ್ರಮ ಸಮಾರಂಭ ಅಂಗವಾಗಿ ದಿನಾಂಕ ಸೆ 10 ರಂದು ನವೀಕೃತ ಮೊಬೈಲ್ ಆಪ್ ಹಾಗೂ ವಾಟ್ಸಾಪ್ ಟಿಕೆಟಿಂಗ್ ಸೌಲಭ್ಯವನ್ನು ಲೋಕಾರ್ಪಣೆಗೊಳಿಸಲಾಗಿದೆ. 

ವಾಟ್ಸಾಪ್ ಮೂಲಕ ಟಿಕೆಟ್ ಬುಕ್ಕಿಂಗ್!

ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ವಾಟ್ಸಾಪ್ ಮೂಲಕ KSRTC, NWKRTC ಹಾಗೂ KKRTC ಬಸ್‌ಗಳ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಒದಗಿಸಲಾಗಿದೆ. ಪ್ರಯಾಣಿಕರು +91 6364940880 ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಬುಕ್ಕಿಂಗ್ ಆರಂಭಿಸಬಹುದು. ನಂತರ ವಾಟ್ಸಾಪ್‌ನಲ್ಲಿಯೇ ಟಿಕೆಟ್ ಬುಕ್ ಮಾಡುವ ಸಂಪೂರ್ಣ ವಿಧಾನ ನಿಮಗೆ ತಿಳಿಯಲಿದೆ.

ಬುಕ್ಕಿಂಗ್ ಹೇಗೆ?

* ಪ್ರಯಾಣ ಆರಂಭದ ಸ್ಥಳ, ಗಮ್ಯಸ್ಥಾನ ಹಾಗೂ ಪ್ರಯಾಣದ ದಿನಾಂಕ ಆಯ್ಕೆ ಮಾಡಿ ಲಭ್ಯವಿರುವ ಬಸ್ ಸೇವೆಗಳನ್ನು ಹುಡುಕಬೇಕು.

* ನಿಮ್ಮ ಪ್ರಯಾಣದ ಆದ್ಯತೆಗೆ ಅನುಗುಣವಾಗಿ ಸೂಕ್ತವಾದ ಬಸ್ ಆಯ್ಕೆ ಮಾಡಬೇಕು.

* ನಂತರ ಹಂತದಲ್ಲಿ ಪ್ರಯಾಣಿಕರ ವಿವರಗಳನ್ನು ನಮೂದಿಸಬೇಕು.

* ಟಿಕೆಟ್ ವಿವರಗಳನ್ನು ಪರಿಶೀಲಿಸಿ ಹಣ ಪಾವತಿ ಪೂರ್ಣಗೊಳಿಸಿದರೆ ಟಿಕೆಟ್ ಬುಕಿಂಗ್ ದೃಢವಾಗಲಿದೆ.

• ಹಣ ಪಾವತಿಗೆ ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಸೇರಿದಂತೆ ವಿವಿಧ ಯುಪಿಐ ಆಪ್ ಗಳನ್ನು ಬಳಸಬಹುದಾಗಿದೆ. ಹಣ ಸಂದಾಯವಾದ ಬಳಿಕ ನಿಮಗೆ ಇ -ಟಿಕೆಟ್ ಸಿಗಲಿದೆ.

ಟಿಕೆಟ್ ಕ್ಯಾನ್ಸಲ್ ಮಾಡುವುದು ಹೇಗೆ?

ಒಂದು ವೇಳೆ ಟಿಕೆಟ್ ಬುಕ್ ಮಾಡಿದ ಬಳಿಕ ಪ್ರಯಾಣ ರದ್ದುಗೊಳಿಸಲು ಇಚ್ಛಿಸಿದರೆ ವಾಟ್ಸಾಪ್ ಮೂಲಕ ಬುಕ್ ಮಾಡಿರುವ ಟಿಕೆಟ್‌ಗಳನ್ನು ಇದೇ ವಾಟ್ಸಾಪ್ ಸಂಖ್ಯೆಯ ಮೂಲಕ ರದ್ದುಪಡಿಸಬಹುದಾಗಿದೆ. ಟಿಕೆಟ್ ರದ್ದುಪಡಿಸಲು ಪ್ರಯಾಣಿಕರು ವಾಟ್ಸಾಪ್‌ನಲ್ಲಿ ಯಾವುದೇ ಒಂದು ಸಂದೇಶವನ್ನು ಕಳುಹಿಸಿ ‘Ticket Cancellation’ ಆಯ್ಕೆ ಒತ್ತಬೇಕು. ನಂತರ ಕೇಳಲಾಗುವ PNR ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಬುಕ್ಕಿಂಗ್ ಸಮಯದಲ್ಲಿ ಪಡೆದ Transaction Password ಅನ್ನು ನಮೂದಿಸಿದರೆ ಸಾಕು ಟಿಕೇಟ್ ರದ್ದು ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.