ರಿಯಲ್ ಹುಚ್ಚು ಹಿಡಿಸಿಕೊಂಡಿರುವ ಇಂದಿನ ಕೆಲ ಯುವಜನತೆ ತಾವು ಫೇಮಸ್ ಆಗಲು ಯಾವ ಸಾಹಸಕ್ಕೆ ಬೇಕಾದರೂ ಕೈ ಹಾಕುತ್ತಾರೆ. ಅದು ತಮಗೆ ಅಪಾಯವನ್ನು ತಂದೊಡ್ಡಬಲ್ಲದು ಎಂಬ ಪರಿಜ್ಞಾನವಿಲ್ಲದೆ ವರ್ತಿಸುತ್ತಾರೆ. ಅಂತೆಯೇ ರೀಲ್ಸ್‌ಗಾಗಿ 3000 ಅಡಿ ಎತ್ತರದ ಬೆಟ್ಟದ ತುದಿಗೆ ಥಾರ್ ಕೊಂಡೋಯ್ದು ಪ್ರವಾಸಿಗರು ಹುಚ್ಚಾಟ ಮೆರೆದ ಘಟನೆ ಮೂಡಿಗೆರೆ ತಾಲೂಕಿನ ರಾಣಿಝರಿಯಲ್ಲಿ ನಡೆದಿದೆ.
ಬೆಂಗಳೂರು ಮೂಲದ ಪ್ರವಾಸಿಗರು ಥಾರ್ ಜೀಪ್‌ನಲ್ಲಿ ರಾಣಿಝರಿಗೆ ಭೇಟಿ ನೀಡಿದ್ದರು. ಈ ವೇಳೆ ರೀಲ್ಸ್‌ಗಾಗಿ ಅಪಾಯಕಾರಿ ಬೆಟ್ಟದ ತುದಿಗೆ ಥಾರ್‌ನ್ನು ಕೊಂಡೊಯ್ದಿದ್ದರು. ಅರಣ್ಯ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಅಧಿಕಾರಿಗಳು ಥಾರ್‌ನ್ನು ಸೀಜ್ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.



