ಸೋಮವಾರ, 26 ಅಕ್ಟೋಬರ್ 2026
Trending

ವಿವೇಕಾನಂದ ಕಾಲೇಜಿನಲ್ಲಿ ಸರ್ಟಿಫಿಕೇಷನ್ ಕುರಿತಾದ ಮಾಹಿತಿ ಕಾರ್ಯಾಗಾರ

Advertisement

ಪುತ್ತೂರು: ಕಾರ್ಪೋರೇಟ್ ಕ್ಷೇತ್ರದಲ್ಲಿ ನಾವು ಆಸಕ್ತಿಯಿಂದ ತೊಡಗಿಸಿಕೊಂಡಾಗ ಒಳ್ಳೆಯ ಭವಿಷ್ಯವಿದೆ. ಇಲ್ಲಿ ಸದಾ ಬದಲಾಗುವ ಕಾರ್ಯತಂತ್ರಗಳ ಬಗ್ಗೆ ನಾವು ಜಾಗೃತರಾಗುತ್ತಾ ಅವುಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ವಿದ್ಯಾರ್ಥಿಗಳು ತಮ್ಮ ಪಠ್ಯ ವಿಷಯಗಳ ಕಲಿಕೆಯೊಂದಿಗೆ ಅದಕ್ಕೆ ಹೊರತಾದ ಅನೇಕ ಕೌಶಲ್ಯಗಳನ್ನು ಕಲಿಯುವುದು ಮುಖ್ಯ. ನಮ್ಮ ಕಾರ್ಯಕ್ಷೇತ್ರಕ್ಕೆ ಪೂರಕವಾದ ಸರ್ಟಿಫಿಕೇಟ್ ಕೋರ್ಸ್ ಮಾಡುವುದು ನಮ್ಮ ವೃತ್ತಿ ಜೀವನದಲ್ಲಿ ಉಪಯೋಗವಾಗಬಲ್ಲದು ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಬೆಂಗಳೂರಿನ ಮೋರ್ಗನ್ ಸ್ಟಾö್ಯನ್ಲಿ ಸಂಸ್ಥೆಯ ಅಸೋಸಿಯೇಟ್ ನಿರಂಜನ್ ಹೇಳಿದರು.

Sponsored

ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ಐಕ್ಯುಎಸಿಯ ಸಹಯೋಗದೊಂದಿಗೆ ‘ಫ್ರಮ್ ಸರ್ಟಿಫಿಕೇಷನ್ ಟು ಕೆರಿಯರ್ : ಅಪ್‌ಸ್ಕಿಲ್ಲಿಂಗ್ ಫಾರ್ ಕೆರಿಯರ್ ಸಕ್ಸಸ್’ ಎಂಬ ಸರ್ಟಿಫಿಕೇಷನ್ ಕುರಿತಾದ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

Advertisement
Advertisement

ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ ಬಿ. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಶುಭಹಾರೈಸಿದರು. ವೇದಿಕೆಯಲ್ಲಿ ವಿದ್ಯಾರ್ಥಿನಿಯರಾದ ಸ್ವರ್ಣ ಹಾಗೂ ಅನಘ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರಥಮ ಎಂಕಾA ವಿದ್ಯಾರ್ಥಿನಿ ವಂಶಿ ಸ್ವಾಗತಿಸಿ ಪ್ರತೀಕ್ಷಾ ಯು.ಕೆ ವಂದಿಸಿದರು. ಪ್ರಥಮ ಎಂಕಾo ವಿದ್ಯಾರ್ಥಿ ಅಭಯಕೃಷ್ಣ. ಟಿ ನಿರೂಪಿಸಿದರು.

Advertisement
div class="ere-sticky">