ಸೋಮವಾರ, 26 ಅಕ್ಟೋಬರ್ 2026
Trending

ಬ್ಲೂಟೂತ್ ಇಯರ್ ಫೋನ್ ಸ್ಫೋಟ, ಯುವಕ ಸಾವು

ಬ್ಲೂಟೂತ್ ಇಯರ್ ಫೋನ್ ಸ್ಫೋಟಗೊಂಡು ಯುವಕನೋರ್ವ ಮೃತಪಟ್ಟ ಘಟನೆ ರಾಜಸ್ಥಾನದ ಜೈಪುರ್ ಜಿಲ್ಲೆಯಲ್ಲಿ ನಡೆದಿದೆ.

Sponsored

ಮೃತ ಯುವಕನನ್ನು ರಾಕೇಶ್ ನಗರ್ ಎಂದು ಗುರುತಿಸಲಾಗಿದೆ. ಈತ ಉದಯ್‍ಪುರ ನಿವಾಸಿಯಾಗಿದ್ದಾನೆ.

ಯುವಕ ಬ್ಲೂಟೂತ್ ಇಯರ್ ಫೋನ್ ಕಿವಿಗೆ ಹಾಕಿಕೊಂಡು ಮಾತನಾಡುತ್ತಿದ್ದನು. ಇದ್ದಕ್ಕಿದ್ದಂತೆ ಇಯರ್ ಫೋನ್ ಸ್ಫೋಟಗೊಂಡಿದೆ. ಸ್ಪೋಟದ ತೀವ್ರತೆಗೆ ಆತನ ಎರಡು ಕಿವಿಗಳಿಗೂ ಗಂಭೀರ ಗಾಯವಾಗಿದೆ ಹಾಗೂ ಇದರಿಂದ ಯುವಕನಿಗೆ ಹೃದಾಯಾಘಾತವಾಗಿದೆ.

ಕೂಡಲೇ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.