ಬಿಗ್ ಬಾಸ್ ಗೋಡೆ ಹಾರಿ ಹೊರ ಓಡಲು ಯತ್ನಿಸಿದ ಸ್ಪರ್ಧಿ!!
ಇದೇ ಸೆಪ್ಟೆಂಬರ್ 6ನೇ ತಾರೀಕಿನಂದು ಕನ್ನಡ ತಮಿಳು ತೆಲುಗು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಗ್ ಬಾಸ್ ಆರಂಭವಾಗಿ ದಾಖಲೆ ಸೃಷ್ಟಿಸಿದೆ. ಆದರೆ ಶೋ ಪ್ರಾರಂಭವಾದ ಎರಡೇ ದಿನಕ್ಕೆ ಸ್ಪರ್ದಿ ಒಬ್ಬರು ಬಿಗ್ ಬಾಸ್ ಮನೆಯ ಗೋಡೆಹಾರಿ ಹೊರಡಲು ಯತ್ನಿಸಿರುವ ಘಟನೆ ನಡೆದಿದೆ.
Sponsoredಅಂದಹಾಗೆ ಈ ಘಟನೆ ನಡೆದಿರುವುದು ತಮಿಳು ಬಿಗ್ ಬಾಸ್ ಮನೆಯಲ್ಲಿ. ‘ಕುಕ್ ವಿತ್ ಕೋಮಾಲಿ’ ಹಾಗೂ ಹಲವು ಜನಪ್ರಿಯ ಕಿರುತೆರೆ ಶೋಗಳ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದ ಅನ್ಸಾರ್, ಅದೇ ಕ್ರೇಜ್‌ನೊಂದಿಗೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ, ಕಾರ್ಯಕ್ರಮ ಆರಂಭವಾದ ಎರಡೇ ದಿನಕ್ಕೆ ಅವರು ಬಿಗ್ ಬಾಸ್ ಮನೆಯ ಗೋಡೆ ಹಾರಿ ಹೊರಹೋಗಲು ಪ್ರಯತ್ನಿಸಿದ್ದಾರೆ. ಈ ಹಿಂದೆ ತಮಿಳು ಬಿಗ್ ಬಾಸ್ ಸೀಸನ್ 1 ರಲ್ಲಿ ನಟ ಭರಣಿ ಅವರು ಗೋಡೆ ಹತ್ತಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಇದೀಗ ಅದೇ ಮಾದರಿಯಲ್ಲಿ ಅನ್ಸಾರ್ ಕೂಡ ಮನೆಯಿಂದ ಓಡಿಹೋಗಲು ಯತ್ನಿಸಿರುವುದು ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದೆ.
ಇನ್ನೂ ಅನ್ಸಾರ್ ಈ ರೀತಿ ಹಠಾತ್ತನೆ ಮನೆ ತೊರೆಯಲು ನಿಖರವಾದ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಆದರೂ, ಬಿಗ್ ಬಾಸ್ ಮನೆಯ ನಾಯಕತ್ವದ ಕುರಿತು ನಡೆದ ಚರ್ಚೆಗಳು ಹಾಗೂ ಸಹ-ಸ್ಪರ್ಧಿ ಜೇಸನ್ ಜೊತೆ ಉಂಟಾದ ತೀವ್ರ ಜಗಳದಿಂದ ಅಸಮಾಧಾನಗೊಂಡು ಅವರು ಈ ಸಾಹಸಕ್ಕೆ ಕೈಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.




