Home » ಬೆಂಗಳೂರು : ಗಂಡ, ಹೆಂಡತಿ ಇಬ್ಬರಿಗೂ ಅಕ್ರಮ ಸಂಬಂಧ – ಆದ್ರೂ ಬೇರೆಯಾಗದೆ ಒಟ್ಟಿಗೆ ಇರೋ ದಂಪತಿ!!

ಬೆಂಗಳೂರು : ಗಂಡ, ಹೆಂಡತಿ ಇಬ್ಬರಿಗೂ ಅಕ್ರಮ ಸಂಬಂಧ – ಆದ್ರೂ ಬೇರೆಯಾಗದೆ ಒಟ್ಟಿಗೆ ಇರೋ ದಂಪತಿ!!

0 comments

ಇಂದಿನ ಕಾಲದಲ್ಲಿ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಯಾರಿಗಾದರೂ  ಮತ್ತೊಬ್ಬರ ಮೇಲೆ ವ್ಯಾಮೋಹ ಇರುವುದಾಗಲಿ ಅಥವಾ ಕ್ಲೋಸ್ ಆಗಿ ಇರುವುದು ಗೊತ್ತಾದರೆ ಸಾಕು ಅಲ್ಲಿಗೆ ಆ ಸಂಸಾರ ಮುರಿದು ಬೀಳುತ್ತದೆ. ಆದರೆ ಬೆಂಗಳೂರಿನಲ್ಲಿ ಒಂದು ಅಪರೂಪದ ದಂಪತಿ ಅಪರೂಪದ ಜೀವನ ನಡೆಸುತ್ತಿದ್ದು, ಗಂಡ ಹೆಂಡತಿ ಇಬ್ಬರಿಗೂ ಪರಸ್ಪರ ಬೇರೆ ಬೇರೆ ಅಕ್ರಮ ಸಂಬಂಧವಿದ್ದರೂ ಒಟ್ಟಿಗೆ ಹಾಯಾಗಿದ್ದಾರೆ.

ಹೌದು, ಗಂಡ ಹೆಂಡತಿ ಇಬ್ಬರು ಪರಸ್ಪರ ವಂಚನೆ ಮಾಡಿದ್ದರೂ, ಅದನ್ನು ಒಪ್ಪಿಕೊಂಡು ಯಾವುದೇ ನಿರ್ಬಂಧಗಳಿಲ್ಲದೆ ಬದುಕಲು ನಿರ್ಧರಿಸಿದ ಬೆಂಗಳೂರಿನ ದಂಪತಿಯ ಕಥೆಯನ್ನು ಆರಾಧ್ಯ ಎಂಬುವವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಈಗ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ನೆಲೆಸಿದ್ದ ಈ ಜೋಡಿ, ಮದುವೆ ಆದ ಹೊಸತರಲ್ಲಿ ಇವರ ವಿವಾಹ ಜೀವನ ಅತ್ಯಂತ ಸುಂದರವಾಗಿಯೇ ಇತ್ತು. ಆದರೆ, ಕಾಲಕ್ರಮೇಣ ಪತ್ನಿಗೆ ತಮ್ಮ ಪಕ್ಕದ ಮನೆಯ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಇರುವುದು ಪತಿಗೆ ತಿಳಿದುಬಂದಿದೆ. ಈ ವಿಚಾರ ತಿಳಿದು ಪತಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಆದರೆ, ಈ ಸಂಬಂಧವನ್ನ ಮುರಿದುಕೊಳ್ಳುವ ಬದಲು, ಆತ ತನ್ನ ಪತ್ನಿಯನ್ನ ಕ್ಷಮಿಸಲು ನಿರ್ಧರಿಸಿದ್ದಾನೆ. ತಮ್ಮ ಸಂಸಾರವನ್ನ ಉಳಿಸಿಕೊಳ್ಳುವ ಉದ್ದೇಶದಿಂದ, ಈ ದಂಪತಿ ಬೆಂಗಳೂರನ್ನ ತೊರೆದು ಹೊಸ ಊರಿನಲ್ಲಿ ಹೊಸ ಜೀವನವನ್ನ ಆರಂಭಿಸಿದರು. ಆರಂಭದ ಕೆಲವು ತಿಂಗಳು ಎಲ್ಲವೂ ಸರಿಯಾಗಿಯೇ ಇತ್ತು. ಆ ಮೇಲೊಂದು ಈ ಕಥಟಗೆ ಟ್ವಿಸ್ಟ್‌ ಸಿಕ್ಕಿದೆ.

ಅದೇನೆಂದರೆ ತಾನು ಪಕ್ಕದ ಮನೆಯವನೊಂದಿಗೆ ಸಂಬಂಧ ಹೊಂದಿದ್ದ ಅದೇ ಸಮಯದಲ್ಲಿ, ತನ್ನ ಪತಿ ಕೂಡ ಬೇರೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಎಂಬ ಆಘಾತಕಾರಿ ವಿಚಾರ ಪತ್ನಿಗೆ ಗೊತ್ತಾಗಿದೆ. ಈ ವಿಚಾರ ತಿಳಿದಾಗ, ಸಾಮಾನ್ಯವಾಗಿ ಎಲ್ಲ ದಂಪತಿಯ ನಡುವೆ ದೊಡ್ಡ ಜಗಳ, ಆರೋಪ-ಪ್ರತ್ಯಾರೋಪಗಳು ನಡೆದು ವಿಚ್ಛೇದನದಲ್ಲಿ ಅಂತ್ಯವಾಗಬೇಕಿತ್ತು. ಆದರೆ, ಈ ಜೋಡಿ ತೆಗೆದುಕೊಂಡ ನಿರ್ಧಾರ ಮಾತ್ರ ಎಲ್ಲರನ್ನೂ ದಂಗಾಗಿಸಿದೆ

ಪರಸ್ಪರ ಇಬ್ಬರ ಗುಟ್ಟುಗಳು ರಟ್ಟಾದ ನಂತರ, ಜಗಳವಾಡುವ ಬದಲು ಅಥವಾ ದೂರವಾಗುವ ಬದಲು, ಅವರು ಒಂದು ಒಪ್ಪಂದಕ್ಕೆ ಬಂದಿದ್ದಾರೆ. ಇನ್ಮುಂದೆ ಇಬ್ಬರೂ ಮದುವೆಯ ಬಂಧದಲ್ಲೇ ಇದ್ದುಕೊಂಡು, ಹೊರಗಡೆ ಬೇರೆ ವ್ಯಕ್ತಿಗಳೊಂದಿಗೆ ಮುಕ್ತವಾಗಿ ಸಂಬಂಧ ಹೊಂದುವ ಸ್ವಾತಂತ್ರ್ಯವನ್ನ ಒಬ್ಬರಿಗೊಬ್ಬರು ನೀಡಿದ್ದಾರೆ. ಯಾರು ಎಲ್ಲಿಗೆ ಹೋಗುತ್ತಾರೆ, ಯಾರೊಂದಿಗೆ ಇರುತ್ತಾರೆ ಎಂಬುದರ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ, ಯಾವುದೇ ಮುಚ್ಚುಮರೆಯಿಲ್ಲ ಹಾಗೂ ಯಾವುದೇ ನಿರ್ಬಂಧಗಳಿಲ್ಲ ಎಂಬ ಷರತ್ತಿನ ಮೇಲೆ ತಮ್ಮ ವಿವಾಹ ಜೀವನವನ್ನ ಮುಂದುವರಿಸಲು ನಿರ್ಧರಿಸಿದ್ದಾರೆ.

ಎಕ್ಸ್ ಬಳಕೆದಾರರಾದ ಆರಾಧ್ಯ ಅವರು ಹಂಚಿಕೊಂಡಿರುವ ಈ ಕಥೆ ಇದೀಗ ಹೊಸದೊಂದು ಚರ್ಚೆಯನ್ನು ಹುಟ್ಟುಹಾಕಿದೆ. ಇದನ್ನೇ ನಾವು ಮಾಡರ್ನ್‌ ರಿಲೇಶನ್‌ಶೀಪ್‌ ಎಂದು ಕರೆಯುವುದಾದರೆ, ಪ್ರೀತಿ, ನಂಬಿಕೆ, ಬದ್ಧತೆ ಮತ್ತು ನಿಷ್ಠೆಗೆ ಬೆಲೆ ಎಲ್ಲಿದೆ? ಎಂಬ ಗಂಭೀರ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ.

You may also like