Home » ಮಗ ಮೃತಪಟ್ಟಿದ್ದಾನೆಂದು ಅಂತ್ಯಕ್ರಿಯೆ ನಡೆಸಿದ ಕುಟುಂಬ- 15 ದಿನಗಳ ಬಳಿಕ ʼಜೀವಂತವಾಗಿದ್ದಾನೆʼ ಎಂದು ಜೈಲಿನಿಂದ ಫೋನ್!!

ಮಗ ಮೃತಪಟ್ಟಿದ್ದಾನೆಂದು ಅಂತ್ಯಕ್ರಿಯೆ ನಡೆಸಿದ ಕುಟುಂಬ- 15 ದಿನಗಳ ಬಳಿಕ ʼಜೀವಂತವಾಗಿದ್ದಾನೆʼ ಎಂದು ಜೈಲಿನಿಂದ ಫೋನ್!!

0 comments

ತಮ್ಮ ಪುತ್ರ ಮೃತಪಟ್ಟಿದ್ದಾನೆಂದು ಭಾವಿಸಿ ಅನಾಥ ಮೃತದೇಹವೊಂದರ ಅಂತ್ಯಕ್ರಿಯೆ ನಡೆಸಿದ್ದ ಕುಟುಂಬಕ್ಕೆ 15 ದಿನಗಳ ಬಳಿಕ, “ನಿಮ್ಮ ಪುತ್ರ ಜೀವಂತವಾಗಿದ್ದಾನೆ” ಎಂಬ ದೂರವಾಣಿ ಕರೆಯೊಂದು ಬಂದಿರುವ ಘಟನೆ ಪಂಜಾಬ್ ನ ಕಪುರ್ತಲಾದಲ್ಲಿ ನಡೆದಿದೆ.

ಕಪುರ್ತಲಾದ ಕಡುಪುರ ಗ್ರಾಮದ ನಿವಾಸಿಯಾದ ರವಿ ಕುಮಾರ್ ಎಂಬ ಯುವಕ ಆಗಸ್ಟ್ 5 ರಂದು ಮನೆಯಿಂದ ನಾಪತ್ತೆಯಾಗಿದ್ದ. ಕುಟುಂಬಸ್ಥರು ಹುಡುಕಾಟ ನಡೆಸಿದರೂ ಸಿಗದಿದ್ದಾಗ, ಆಗಸ್ಟ್ 11 ರಂದು ಕಪುರ್ತಲಾ ಸಿಟಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಅದೇ ಸಮಯದಲ್ಲಿ ಪೊಲೀಸರಿಗೆ ಕಂಜ್ಲಿ ರಸ್ತೆ ಬಳಿ ಸುಟ್ಟ ಹಾಗೂ ಕೊಳೆತ ಸ್ಥಿತಿಯಲ್ಲಿದ್ದ ಅಪರಿಚಿತ ಯುವಕನ ಶವ ಪತ್ತೆಯಾಗಿತ್ತು. ಅದರ ಮುಖ ಗುರುತಿಸಲಾಗದ ಸ್ಥಿತಿಯಲ್ಲಿದ್ದರಿಂದ, ಪೊಲೀಸರು ತೋರಿಸಿದ ಫೋಟೋ ಮತ್ತು ಬಟ್ಟೆಗಳ ಆಧಾರದ ಮೇಲೆ ಕುಟುಂಬಸ್ಥರು ಅದು ರವಿ ಕುಮಾರ್ ಅವರದ್ದೇ ಶವ ಎಂದು ತಪ್ಪಾಗಿ ಗುರುತಿಸಿದ್ದರು.

ನಮ್ಮ ಪುತ್ರ ಮೃತಪಟ್ಟಿದ್ದಾನೆ ಎಂದು ಭಾವಿಸಿದ ಕುಟುಂಬದ ಸದಸ್ಯರು, ಆಗಸ್ಟ್ 13ರಂದು ಮೃತದೇಹದ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಆದರೆ, ಸೆಪ್ಟೆಂಬರ್ 2ರಂದು ಅನಿರೀಕ್ಷಿತ ಬೆಳವಣಿಗೆ ನಡೆದಿದೆ. ರವಿಕುಮಾರ್ ಕುಟುಂಬದ ಸದಸ್ಯರಿಗೆ ಕರೆ ಮಾಡಿರುವ ಕಪುರ್ತಲಾ ಕೇಂದ್ರ ಕಾರಾಗೃಹದ ಉದ್ಯೋಗಿಯೊಬ್ಬರು, ರವಿಕುಮಾರ್ ಎಂಬ ಹೆಸರಿನ ವ್ಯಕ್ತಿಯನ್ನು ಜೈಲಿನಲ್ಲಿರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಗಮನಾರ್ಹ ಸಂಗತಿಯೆಂದರೆ, ಬೀದಿಯಲ್ಲಿ ಅನುಮಾನಾಸ್ಪದವಾಗಿ ಅಡ್ಡಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ತಿಂಗಳ ಹಿಂದೆ ಜಲಂಧರ್ ಪೊಲೀಸರಿಂದ ಬಂಧಿತನಾಗಿದ್ದ ರವಿಕುಮಾರ್ ನನ್ನು ಕೇಂದ್ರ ಕಾರಾಗೃಹದಲ್ಲಿರಿಸಲಾಗಿತ್ತು.

ಈ ಮಾಹಿತಿಯಿಂದ ಕುಟುಂಬದ ಸದಸ್ಯರು ಗೊಂದಲಕ್ಕೀಡಾಗಿದ್ದಾರೆ. ಮರುದಿನ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿರುವ ಕುಟುಂಬದ ಸದಸ್ಯರು ರವಿಕುಮಾರ್ ಜೀವಂತವಾಗಿರುವುದನ್ನು ಪತ್ತೆ ಹಚ್ಚಿದ್ದಾರೆ

You may also like