ಸೋಮವಾರ, 26 ಅಕ್ಟೋಬರ್ 2026
Trending

ಬ್ಯಾಂಕ್ ಗ್ರಾಹಕರೇ ಗಮನಿಸಿ | ಇಂದಿನಿಂದ ಬ್ಯಾಂಕ್ ಸಮಯದಲ್ಲಿ ಮಹತ್ತರ ಬದಲಾವಣೆ

ಬ್ಯಾಂಕ್‌ ವಹಿವಾಟನ್ನು ನಡೆಸಲು ಹೆಚ್ಚುವರಿ ಸಮಯ ಬ್ಯಾಂಕ್ ಗ್ರಾಹಕರಿಗೆ ಸಿಗುವ ದೃಷ್ಟಿಯಿಂದ ಆರ್‌ಬಿಐ ಬ್ಯಾಂಕ್‌ ಸಮಯವನ್ನು ಬದಲಾಯಿಸಿದ್ದು,11 ಗಂಟೆ ಹೆಚ್ಚುವರಿ ಸಮಯ ಸಿಗುತ್ತದೆ.ಇದು ಏಪ್ರಿಲ್ 18 ಅಂದರೆ ಇಂದಿನಿಂದಲೇ ಬೆಳಗ್ಗೆ 9 ಗಂಟೆಗೇ ಬ್ಯಾಂಕ್‌ಗಳು ತೆರೆಯಲಿವೆ.

Sponsored

ಕೊರೊನಾ ಕಾರಣಕ್ಕೆ ಬ್ಯಾಂಕ್‌ ವಹಿವಾಟಿನ ಸಮಯವನ್ನು ಈವರೆಗೆ ಕಡಿಮೆ ಮಾಡಲಾಗಿತ್ತು.ಬೆಳಿಗ್ಗೆ 10 ರಿಂದ ಮಧ್ಯಾಹ್ನ 3.30 ಕ್ಕೆ ಬದಲಾಯಿಸಲಾಗಿತ್ತು. ಇದೀಗ ಸೋಂಕು ಕಡಿಮೆಯಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಹಾಗಾಗಿ ಬ್ಯಾಂಕ್‌ಗಳನ್ನು ಬೆಳಿಗ್ಗೆ 9 ಗಂಟೆಗೇ ತೆರೆಯಲು ಆರ್‌ಬಿಐ ನಿರ್ಧರಿಸಿದೆ.ಆದರೆ ಬ್ಯಾಂಕ್‌ಗಳು ಮುಚ್ಚುವ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಬ್ಯಾಂಕ್‌ಗಳ ಕಾರ್ಯನಿರ್ವಹಣೆಗೆ ಇನ್ನೂ ಒಂದು ಗಂಟೆಯನ್ನು ಸೇರಿಸಲಾಗಿದೆ.

Advertisement
Advertisement

ಬೇಗನೆ ಬ್ಯಾಂಕ್‌ ವಹಿವಾಟು ಆರಂಭವಾಗುವುದರಿಂದ ವಿದೇಶಿ ವಿನಿಮಯ ಮಾರುಕಟ್ಟೆ ಮತ್ತು ಸರ್ಕಾರಿ ಸೆಕ್ಯುರಿಟಿಗಳಲ್ಲಿನ ವಹಿವಾಟುಗಳು ಸಾಧ್ಯವಾಗುತ್ತವೆ.ಇಂದಿನಿಂದ ಆರ್‌ಬಿಐ ನಿಯಂತ್ರಿತ ಮಾರುಕಟ್ಟೆಗಳಾದ ಫಾರೆಕ್ಸ್ ಉತ್ಪನ್ನಗಳು, ರೂಪಾಯಿ ಬಡ್ಡಿ ದರದ ಉತ್ಪನ್ನಗಳು, ಕಾರ್ಪೊರೇಟ್ ಬಾಂಡ್‌ಗಳಲ್ಲಿನ ರೆಪೊ, ವಿದೇಶಿ ವಿನಿಮಯ, ಭಾರತೀಯ ರೂಪಾಯಿ (ಐಎನ್‌ಆರ್) ವಹಿವಾಟುಗಳು ಬೆಳಗ್ಗೆ 10 ಗಂಟೆ ಬದಲು 9 ಗಂಟೆಗೆ ಆರಂಭವಾಗಲಿವೆ.

Advertisement