ಸೋಮವಾರ, 26 ಅಕ್ಟೋಬರ್ 2026
Trending

Bangla Desh: ಬಾಂಗ್ಲಾ ದೇಶ ಚುನಾವಣೆ – ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆಲುವು

Bangla Desh: ಕೆಲವು ದಿನಗಳ ಹಿಂದೆ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿದ್ದು, ತಾರಿಕ್ ರೆಹೆಮಾನ್ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಭರ್ಜರಿ ಗೆಲುವು ದಾಖಲಿಸಿದೆ. ಈ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

Sponsored

ಸರಿಸುಮಾರು 2 ದಶಕಗಳ ಬಳಿಕ ಬಿಎನ್‌ಪಿ ಬಾಂಗ್ಲಾದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ವಿಶೇಷ ಅಂದರೆ ಈ ಬಾಂಗ್ಲಾದೇಶ ಚುನಾವಣೆಯಲ್ಲಿ ಬಾಂಗ್ಲಾದೇಶದ ಭೋಲಾ 1 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಬಿಜೆಪಿ ಅಂದರೆ ಭಾರತದ ‘ಭಾರತೀಯ ಜನತಾ ಪಾರ್ಟಿ’ ಅಲ್ಲ. ಬಾಂಗ್ಲಾದೇಶದಲ್ಲಿ ಅಸ್ತಿತ್ವದಲ್ಲಿರುವ ‘ಬಾಂಗ್ಲಾ ಜಾತೀಯ ಪಾರ್ಟಿ’.

ನಜೀಉರ್ ರೆಹಮಾನ್ ಮನ್ಜೂರ್ ಸ್ಥಾಪಿಸಿದ ಬಿಜೆಪಿ ಪಕ್ಷದ ಅಭ್ಯರ್ಥಿ ಅಂದಲೀವೆ ರಹಮಾನ್ ಪಾರ್ಥೋ ಬಿಜೆಪಿ ಪಕ್ಷದಿಂದ ಆರಿಸಿ ಬಂದಿದ್ದಾರೆ. ಬಾಂಗ್ಲಾದೇಶ ಜಾತೀಯ ಪಾರ್ಟಿ 2001ರಿಂದ 2006ರ ವರೆಗೆ ಮೈತ್ರಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತ್ತು. ಜಾತಿಯಾ ಪಾರ್ಟಿ ಆಗಿ ಜನ್ಮ ತಾಳಿದ್ದ ಪಾರ್ಟಿ ಬಳಿಕ ಒಡೆದು ಭಾರತೀಯ ಜಾತೀಯ ಪಾರ್ಟಿಯಾಗಿ ಹೊರಹೊಮ್ಮಿತ್ತು. ಇದೀಗ ಬಾಂಗ್ಲಾದೇಶದಲ್ಲಿ ಬಿಜೆಪಿ ಮತ್ತೆ ಪಕ್ಷ ಸಂಘಟನೆ ಬಲಗೊಳಿಸುತ್ತಿದೆ. 

ಕೆಲವು ಸಮಯದಿಂದ ಬಾಂಗ್ಲಾದಲ್ಲಿ ಬಿಜೆಪಿ ಸೊರಗಿತ್ತು. ಆದರೆ ಇದೀಗ ಮತ್ತೆ ಬಿಜೆಪಿ ಪುಟಿದೆದ್ದಿದಿ. ಒಂದು ಸ್ಥಾನ ಗೆಲ್ಲುವ ಮೂಲಕ ಬಾಂಗ್ಲಾದೇಶದಲ್ಲಿ ಮತ್ತೆ ಪ್ರಬಲ ಪಕ್ಷವಾಗಿ ಹಾಗೂ ಮೈತ್ರಿ ಅವಕಾಶಗಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಮುಂದಿನ ಚುನಾವಣೆ ವೇಳೆಗೆ ಮೈತ್ರಿ ಸರ್ಕಾರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕು ಅನ್ನೋ ಗುರಿಯೊಂದಿಗೆ ಬಿಜೆಪಿ ಹೋರಾಟ ಆರಂಭಿಸಿದೆ.