ಭಾನುವಾರ, 25 ಅಕ್ಟೋಬರ್ 2026
Trending

ಶಾಲೆಯ ಬಿಸಿ ಊಟದಲ್ಲಿತ್ತು ಹಾವಿನ ಮರಿ – 250 ವಿದ್ಯಾರ್ಥಿಗಳು ಅಸ್ವಸ್ಥ!!

ಶಾಲೆಯ ಮಧ್ಯಾನದ ಬಿಸಿ ಊಟದಲ್ಲಿ ಹಾವಿನ ಮರಿಯೊಂದು ಪತ್ತೆಯಾಗಿದ್ದು ಅದನ್ನು ಸೇವಿಸಿದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

Sponsored

ಸಹರ್ಸಾ ಜಿಲ್ಲೆಯ ಮಹಿಷಿ ಬ್ಲಾಕ್‌ನ ಬಲುವಾಹಾ ಸರ್ಕಾರಿ ಮಾಧ್ಯಮ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಮೃತ ಹಾವಿನ ಮರಿಯೊಂದು ಪತ್ತೆಯಾಗಿದೆ. ಊಟ ಸೇವಿಸಿದ ವಿದ್ಯಾರ್ಥಿಗಳು ಹೊಟ್ಟೆ ನೋವು, ವಾಂತಿ ಮತ್ತು ತಲೆಸುತ್ತಿನಿಂದ ಅಸ್ವಸ್ಥರಾಗಿದ್ದಾರೆ.

ಸುಮಾರು 250 ಮಕ್ಕಳನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು, ಅವರಲ್ಲಿ 115 ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಹರ್ಸಾ ಸದರ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಎಲ್ಲಾ ಮಕ್ಕಳ ಸ್ಥಿತಿ ಸ್ಥಿರವಾಗಿದೆ. ಜಿಲ್ಲಾಧಿಕಾರಿ ದೀಪೇಶ್ ಕುಮಾರ್ ಅವರು ಈ ಕುರಿತು ತನಿಖೆಗೆ ಆದೇಶಿಸಿದ್ದು, ಬಿಸಿಯೂಟ ಪೂರೈಸುವ NGO ಮತ್ತು ಶಾಲಾ ಆಡಳಿತದ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ಸೂಚಿಸಿದ್ದಾರೆ.