ತಿರುಮಲ, ಜೂ.28: ತಿರುಪತಿ ದೇವಸ್ಥಾನದ ಭಕ್ತರಾಗಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯಕಾರಿ ನಿರ್ದೇಶಕ ಅನಂತ್ ಅಂಬಾನಿ ಅವರು ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಇಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸಾಂಪ್ರದಾಯಿಕ ಉಡುಪಿನಲ್ಲಿ ದೇವಸ್ಥಾನಕ್ಕೆ ಬಂದ ಅನಂತ್ ಅಂಬಾನಿ, ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದಲ್ಲದೆ, ತಮ್ಮ ಕೂದಲನ್ನು ದೇವರಿಗೆ ಮುಡಿ ನೀಡಿ ತಮ್ಮ ಹರಕೆ ತೀರಿಸಿದ್ದಾರೆ.
ದೇವಾಲಯಕ್ಕೆ ಆಗಮಿಸಿದ ಅನಂತ್ ಅಂಬಾನಿ ಅವರನ್ನು ತಿರುಮಲ ತಿರುಪತಿ ದೇವಸ್ಥಾನಂ ಅಧಿಕಾರಿಗಳು ಮತ್ತು ಅರ್ಚಕರು ಆತ್ಮೀಯವಾಗಿ ಸ್ವಾಗತಿಸಿದರು. ರಂಗನಾಯಕುಲ ಮಂಟಪದಲ್ಲಿ ಅವರಿಗೆ ವೇದ ಮಂತ್ರಗಳ ಮೂಲಕ ಆಶೀರ್ವಾದ ನೀಡಿ, ತೀರ್ಥ ಪ್ರಸಾದ ಹಾಗೂ ದೇವರ ಪವಿತ್ರ ಶೇಷ ವಸ್ತ್ರವನ್ನು ನೀಡಿ ಗೌರವಿಸಲಾಯಿತು.
Tirupati, Andhra Pradesh: Reliance Industries Executive Director, Anant Ambani, offered his hair at Tirumala Sri Venkateswara Swami Temple, in keeping with a centuries-old tradition of devotion. pic.twitter.com/lHOIePTE5k
— ANI (@ANI) June 28, 2026



