ಪುತ್ತೂರು: ದರ್ಬೆಯಲ್ಲಿ ಕೆಲ ದಿನಗಳ ಹಿಂದೆ ಲ್ಯಾಮಿನೇಶನ್‌ಗೆ ನೀಡಲಾಗಿದ್ದ ಜನನ ಪ್ರಮಾಣಪತ್ರಕ್ಕೆ ಹಾನಿ ಆಗಿರುವ ವಿಚಾರಕ್ಕೆ ಕುರಿತಂತೆ ಗಲಾಟೆ ನಡೆದಿತ್ತು. ಈ ಗಲಾಟೆ ಘಟನೆ ಕುರಿತಂತೆ ಅಂಗಡಿ ಮಾಲಕಿ ಅಂಜನಾ ಎಸ್ ಪೈ ಅವರಿಗೆ ಹಲ್ಲೆ ಮಾಡಿ, ಬೆದರಿಕೆ ಹಾಕಿದ ಆರೋಪಕ್ಕೆ ಕುರಿತಂತೆ ಇಬ್ಬರು ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
Sponsoredಪ್ರಕರಣದ ಆರೋಪಿಗಳಾದ ಚಿಕ್ಕಮುಳ್ಳೂರು ತಾರಿಗುಡ್ಡೆ ನಿವಾಸಿ ಮಹಮ್ಮದ್ ನೌಷಾದ್ (32) ಹಾಗೂ ಪೆರ್ನೆ ನಿವಾಸಿ ಅಬ್ದುಲ್ ನಿಯಾಝ್ (26) ಅವರಿಗೆ ಪುತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.




