ಶನಿವಾರ, 24 ಅಕ್ಟೋಬರ್ 2026

ಸರ್ಕಾರಿ ಶಾಲೆಗಳನ್ನು ಗುರಿಯಾಗಿಸಿ ಮುಂದಿನ ಹೋರಾಟ – ಅಭಿಜಿತ್ ದೀಪ್ಕೆ ಘೋಷಣೆ!!

ಕಾಕ್ಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರು ಸಿಜೆಪಿಯ ಜನಪ್ರಿಯ ಜಂತರ್-ಮಂತರ್ ಪ್ರತಿಭಟನೆಯ ಎರಡನೇ ಸೀಸನ್ ಅತಿ ಶೀಘ್ರದಲ್ಲೇ ಆರಂಭವಾಗಲಿದ್ದು, ಈ ಬಾರಿ ದೇಶದ ಸರ್ಕಾರಿ ಶಾಲೆಗಳನ್ನು ಗುರಿಯಾಗಿಸಿಕೊಂಡು ಮುಂದಿನ ಹೋರಾಟ ನಡೆಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್, ಪ್ರಸ್ತುತ ಪ್ರತಿಭಟನೆಗಳು “ಸೀಸನ್ 2” ರ ಭಾಗವಾಗಿದ್ದು, ದೇಶಾದ್ಯಂತ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದರು. ಸ್ವಾತಂತ್ರ್ಯ ದಿನಾಚರಣೆಯಿಂದ ಪಕ್ಷವು ಶಿಕ್ಷಣ ಕ್ಷೇತ್ರದ ಮೇಲೆ ವಿಶೇಷ ಗಮನಹರಿಸಲಿದೆ. ನಾಗರಿಕರು ನೇರವಾಗಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು ಹಾಗೂ ಶಾಲೆಗಳ ನೈಜ ಸ್ಥಿತಿಗತಿಗಳನ್ನು ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಿಜೆಪಿಯ ಮತ್ತೊಬ್ಬ ಮುಖಂಡ ಅಶುತೋಷ್ ರಾಂಕಾ ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದಲೂ ಸರ್ಕಾರಿ ಶಾಲೆಗಳನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸಲಾಗಿದೆ. ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಸಿಜೆಪಿ ಹೊಸ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಆಯಾ ಗ್ರಾಮಗಳ ಸರಪಂಚರು ಮತ್ತು ಸ್ಥಳೀಯ ಮುಖ್ಯಸ್ಥರು ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಿದ್ದಾರೆ. ಒಂದು ವೇಳೆ ಅವರು ಕ್ರಮ ಕೈಗೊಳ್ಳಲು ವಿಫಲವಾದರೆ ರಾಜ್ಯವ್ಯಾಪಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.