ಶನಿವಾರ, 24 ಅಕ್ಟೋಬರ್ 2026

ಐತಿಹಾಸಿಕ ಕ್ಷಣ- ಮೊದಲಬಾರಿಗೆ ‘ವಂದೇ ಮಾತರಂ’ ಗೀತೆಯೊಂದಿಗೆ ಸಂಸತ್ ಅಧಿವೇಶನ ಆರಂಭ!!

ಸಂಸತ್ತಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಲೋಕಸಭೆಯ ಕಲಾಪವು ರಾಷ್ಟ್ರಗೀತೆಯಾದ ‘ವಂದೇ ಮಾತರಂ’ ಗಾಯನದೊಂದಿಗೆ ಆರಂಭವಾಗುವ ಮೂಲಕ ಸುಂದರ ಹಾಗೂ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.

ಮಳೆಗಾಲದ ಅಧಿವೇಶನದ ಕೊನೆಯ ದಿನವಾದ ಇಂದು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಈ ಐತಿಹಾಸಿಕ ಕ್ಷಣ ಜರುಗಿತು. ರಾಷ್ಟ್ರಗೀತೆಯ ಒಟ್ಟು ಆರು ಚರಣಗಳನ್ನು ಪ್ರಸಾರ ಮಾಡಿದ ನಂತರ, ಲೋಕಸಭೆಯ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಇದೇ ವೇಳೆ ರಾಜ್ಯಸಭೆಯ ಕಲಾಪಕ್ಕೂ ಸಹ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವ ಮೂಲಕ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಇತ್ತೀಚೆಗಷ್ಟೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ವಂದೇ ಮಾತರಂ’ ಗೀತೆಗೆ ಕಾನೂನುಬದ್ಧ ರಕ್ಷಣೆ ಮತ್ತು ಗೌರವ ನೀಡುವ ಮಸೂದೆಗೆ ಅಂಕಿತ ಹಾಕಿದ್ದರು. ಈ ಕಾಯ್ದೆಯನ್ವಯ ರಾಷ್ಟ್ರಗೀತೆಯ ಗಾಯನಕ್ಕೆ ಅಡ್ಡಿಪಡಿಸುವುದು ಅಥವಾ ಗೊಂದಲ ಉಂಟುಮಾಡುವುದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗಿದ್ದು, ರಾಷ್ಟ್ರಗೀತೆ ‘ಜನ ಗಣ ಮನ’ಗೆ ನೀಡಲಾಗುವ ಕಾನೂನು ಅಂತಸ್ತನ್ನೇ ಇದಕ್ಕೂ ಕಲ್ಪಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯವು ಹೊರಡಿಸಿದ ಮಾರ್ಗಸೂಚಿಯಂತೆ ಅಧಿಕೃತ ಸಮಾರಂಭಗಳಲ್ಲಿ ಈ ಗೀತೆಯ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಅಂತೀಯ ಇಂದು ಪ್ರಪ್ರಥಮ ಬಾರಿಗೆ ಲೋಕಸಭೆಯಲ್ಲಿ ವಂದೇ ಮಾತರಂ ಗೀತೆಯನ್ನು ಹಾಡುವುದರ ಮೂಲಕ ಕಲಾಪವನ್ನು ಆರಂಭಿಸಲಾಗಿದೆ.