ಭಾನುವಾರ, 25 ಅಕ್ಟೋಬರ್ 2026
Trending

ಅಬ್ದುಲ್ ರೆಹಮಾನ್ ಕೊಲೆ ಕೇಸ್ – ಪೊಲೀಸ್ ಕೊಟ್ಟ ನೋಟೀಸ್ ನನ್ನ ಕೂದಲಿಗೆ ಸಮ ಎಂದ ಕಲ್ಲಡ್ಕ ಪ್ರಭಾಕರ್ ಭಟ್‌

ಕರಾವಳಿ ಭಾಗದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಬಂಟ್ವಾಳದ ಕೊಳತ್ತಮಜಲು ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

Sponsored

ಈ ಬಗ್ಗೆ ಬಿಸಿ ರೋಡ್ ಚಲೋ ಪ್ರತಿಭಟನಾ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್‌ಎಸ್‌ಎಸ್ (RSS) ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು ಬಂಟ್ವಾಳದ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣ ಸಂಪೂರ್ಣವಾಗಿ ವೈಯಕ್ತಿಕ ದ್ವೇಷದಿಂದ ನಡೆದಿದ್ದು, ವೈಯಕ್ತಿಕ ದ್ವೇಷದ ಪ್ರಕರಣವನ್ನು ಹಿಂದುತ್ವ ಸಂಘಟನೆಗಳ ಮೇಲೆ ಹೊರಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ನಾವು ಎಂದಿಗೂ ಹತ್ಯೆಯನ್ನು ಪ್ರತಿಪಾದಿಸುವುದಿಲ್ಲ. ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲದ ಭರತ್ ಕುಮ್ದೇಲ್ ಹಾಗೂ ಇತರರ ಮೇಲೆ ಕೇಸ್ ಹಾಕಿ ಗೂಂಡಾ ಕಾಯ್ದೆ ಹೇರಲಾಗಿದೆ. ಇದು ಯಾವ ಸಂವಿಧಾನ ಹೇಳಿದ ಕಾನೂನು?” ಎಂದು ಪ್ರಶ್ನಿಸಿದರು.”ಭರತ್ ಕುಮ್ದೇಲ್ ಬಂಧನವಾದಾಗ ಆತನ ಮನೆಯಲ್ಲಿ ಊಟಕ್ಕೂ ಕಷ್ಟವಿತ್ತು. ಮಗುವಿಗೆ ಅನಾರೋಗ್ಯ ಉಂಟಾಗಿ ಆತನ ಕುಟುಂಬದವರು ರಿಕ್ಷಾದಲ್ಲಿ ಕರೆದುಕೊಂಡು ಹೋದರೆ, ಆ ರಿಕ್ಷಾದವನ ಮೇಲೆಯೂ ಕೇಸ್ ಹಾಕಿದ್ದಾರೆ.

ಎಂತಹ ಪಾಪಿಗಳು ಇವರು! ಕುಟುಂಬಸ್ಥರು ಸಹಕಾರ ಕೇಳಿದಾಗ ಸಹಾಯ ಮಾಡಿದವರ ಮೇಲೂ ಕೇಸ್ ಹಾಕುತ್ತಿದ್ದಾರೆ. ಪೊಲೀಸರು ಕಾನೂನಿನಂತೆ ಕೆಲಸ ಮಾಡಬೇಕೇ ಹೊರತು ಗೃಹಮಂತ್ರಿ ಹಾಗೂ ಮುಖ್ಯಮಂತ್ರಿಗಳ ಚೇಲಾಗಳಂತೆ ವರ್ತಿಸಬಾರದು” ಎಂದು ಕಿಡಿಕಾರಿದರು.ತಮಗೆ ಪೊಲೀಸರು ವಿಚಾರಣೆಗೆ ನೋಟಿಸ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಭಟ್, “ನನ್ನ ಮೇಲೂ ಕೇಸ್ ಹಾಕಲು ಹೊರಟಿದ್ದಾರೆ. ಇದು ನನಗೆ ದೊಡ್ಡ ವಿಷಯವೇ ಅಲ್ಲ, ನನ್ನ ಕೂದಲಿಗೆ ಸಮ ಎಂದಿದ್ದಾರೆ.