ಹೆತ್ತವರಿಗೆ ತಮ್ಮ ಮಕ್ಕಳು ಮದುವೆ ವಯಸ್ಸುಗೆ ಬಂದ ಬಳಿಕ ಅವರಿಗೆ ಒಳ್ಳೆಯ ಹುಡುಗ ಅಥವಾ ಹುಡುಗಿಯನ್ನು ಹುಡುಕಿ ಮದುವೆ ಮಾಡಿಸಬೇಕು ಎಂಬುದು ಕನಸಾಗಿರುತ್ತದೆ. ಇಂದಿನ ಯುವಕರಿಗೆ ಬೇಗ ಮದುವೆಯಾಗಬೇಕೆಂಬ ಆಸೆ ಇದ್ದರೂ ಯುವತಿಯರು ಮಾತ್ರ ಮದುವೆ ಎಂದರೆ ಸ್ವಲ್ಪ ಮೂಗು ಮುರಿಯುವುದುಂಟು. ವಯಸ್ಸು ಹೆಚ್ಚಾದರೂ ಮದುವೆ ಮಾಡಿಕೋ ಎಂದಾಗ ಈಗಲೇ ಮದುವೆ ಬೇಡ, ನಾನಿನ್ನು ಓದಬೇಕು, ದುಡಿಯಬೇಕು ಎಂದು ಸಬೂಬು ನೀಡಿ ತಮ್ಮ ವಿವಾಹ ಸಮಾರಂಭವನ್ನು ಮುಂದೂಡುತ್ತಾರೆ.
ಅಂತೆಯೇ ಇಲ್ಲೊಂದು ಕುಟುಂಬದಲ್ಲಿ ತಾಯಿಯೊಬ್ಬಳು ತನ್ನ ಮಗಳಿಗೆ ‘ಮಗಳೇ ಬೇಗ ಮದುವೆ ಮಾಡಿಕೋ, ವಯಸ್ಸಾಗುತ್ತಿದೆ. ನನ್ನ ಜವಾಬ್ದಾರಿಯನ್ನು ನಾನು ಮಾಡಿ ಮುಗಿಸುತ್ತೇನೆ’ ಎಂದು
ಗೋಗರೆದಿದ್ದಾರೆ. ಆರಂಭದಲ್ಲಿ ತಾಯಿಯ ಮಾತಿಗೆ ಏನೇನು ಕಾರಣ ಕೊಟ್ಟು ನೋಡುಚಿಕೊಳ್ಳುತ್ತಿದ್ದ ಯುವತಿ ಕೊನೆಗೆ ಮದುವೆ ವಿಚಾರದಿಂದ ಬಿಡಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾಳೆ. ಆಗ ತಾಯಿಯ ಈ ಬೇಡಿಕೆಗೆ ಮಗಳು ಸ್ಪಂದಿಸಿದ್ದು ಮಾತ್ರ ತಲೆ ಬೋಳಿಸಿಕೊಂಡು!!
ಹೌದು, ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತಾದ ವಿಡಿಯೋ ಒಂದು ವೈರಲ್ ಆಗುತ್ತಿದೆ. @keertana. menonn ಎಂಬ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಯುವತಿ ಕೀರ್ತನ ತಲೆ ಬೋಳಿಸಿಕೊಳ್ಳುತ್ತಿರುವುದನ್ನು ಕಾಣಬಹುದು. ಅಲ್ಲದೆ ಅದರ ಮೇಲೆ ಅಮ್ಮ ಮದುವೆ ಮಾಡಿಕೋ ಎಂದಾಗ ನಾನು ಮಾಡಿದ ಕೆಲಸ ಎಂದು ಯಾಕೆ ಬರೆದುಕೊಂಡಿದ್ದಾಳೆ. ತದನಂತರ ತನ್ನ ಸ್ನೇಹಿತ ಬಳಗಕ್ಕೆಲ್ಲ ವಿಡಿಯೋ ಕಾಲ್ ಮಾಡಿ ತಾನು ಮಾಡಿರುವ ಸಾಹಸವನ್ನು ತೋರ್ಪಡಿಸಿದ್ದಾಳೆ. ತನ್ನ ಸ್ನೇಹಿತೆಯ ಹೊಸ ಅವತಾರವನ್ನು ಕಂಡು ಎಲ್ಲರೂ ಶಾಕ್ ಆಗಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪರ-ವಿರೋಧಗಳ ಚರ್ಚೆಗಳು ಶುರುವಾಗಿವೆ. ಕೆಲವರು ಹುಡುಗಿಯ ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಮದುವೆ ಅಂದ ತಕ್ಷಣ ಕೆಲವರು ಭಯ ಬಿದ್ದು, ದುಡುಕಿನ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಆದರೆ ಈ ಹುಡುಗಿ ವಿಭಿನ್ನ ನಡೆ ಇಟ್ಟಿರುವುದು ನಿಜಕ್ಕೂ ಮೆಚ್ಚುವಂಥದ್ದು. ಒಂದು ರೀತಿ ಇದು ಹಾಸ್ಯಸ್ಪದವ ಕೂಡ ಆಗಿದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
https://www.instagram.com/reel/DanMEFEtCPW/?igsh=MXczYXByODJ2bDV3cA==




