ಅಪ್ಪನ ಔಷಧಿ ದುಡ್ಡಲ್ಲಿ ಗರ್ಲ್ ಫ್ರೆಂಡ್ ಗೆ ಗಿಫ್ಟ್ ಕೊಟ್ಟ ಯುವಕ- ಆದ್ರೆ ಆಕೆ ಮಾಡಿದ್ದೇನು ಗೊತ್ತಾ?
ಹದಿಹರೆಯದಲ್ಲಿ ಹುಟ್ಟುವ ಪ್ರೀತಿ- ಪ್ರೇಮಗಳು ತಮ್ಮ ಪೋಷಕರ ಕಷ್ಟ- ದುಃಖ, ದುಮ್ಮಾನಗಳನ್ನು ಮರೆಸಿಬಿಡುತ್ತವೆ. ಎಲ್ಲದಕ್ಕಿಂತಲೂ ತಾನೇ ಪ್ರೀತಿಸುವ ಹುಡುಗಿ- ಹುಡುಗನೇ ಹೆಚ್ಚು ಎಂದು ಅನಿಸಿ, ಅವರೇ ತನ್ನ ಪ್ರಪಂಚವೆಂದೆಣಿಸಿ ಅವರಿಗಾಗಿ ಏನು ಬೇಕಾದರೂ ಮಾಡಿಬಿಡಬೇಕೆನಿಸುತ್ತದೆ. ಏನು ಮಾಡೋದು ಹೇಳಿ? ಹರೆಯವೇ ಹಾಗಲ್ಲವೇ? ಅಂತೆಯೇ ಇಲ್ಲೊಬ್ಬ ಯುವಕ ತನ್ನ ತಂದೆಯ ಆರೋಗ್ಯದ ಕಡೆಯೂ ಗಮನಕೊಡದೆ, ಅವರ ಔಷಧಿ ದುಡ್ಡಲ್ಲಿ ಗರ್ಲ್ ಫ್ರೆಂಡ್ ಗೆ ಗಿಫ್ಟ್ ಕೊಟ್ಟಿದ್ದಾನೆ. ಆದರೆ ಗಿಫ್ಟ್ ಪಡೆದ ಬಳಿಕ ಆಕೆ ಮಾಡಿದ್ದೇನು ಗೊತ್ತೇ?
Sponsoredಸಾಮಾನ್ಯ ಕುಟುಂಬದ ಯುವಕನೊಬ್ಬ ತಾನು ಇಷ್ಟಪಟ್ಟ ಆನ್‌ಲೈನ್ ಸ್ನೇಹಿತೆಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಲು ಆಸೆಪಟ್ಟಿದ್ದ. ಆದರೆ, ಆತನ ಬಳಿ ಹೆಚ್ಚು ಹಣವಿರಲಿಲ್ಲ. ತನ್ನ ಅನಾರೋಗ್ಯ ಪೀಡಿತ ತಂದೆಯ ಚಿಕಿತ್ಸೆ ಮತ್ತು ಔಷಧಿಗೆಂದು ಇಟ್ಟಿದ್ದ ಹಣದಲ್ಲೇ ಸ್ವಲ್ಪ ಹಣವನ್ನು ಕಷ್ಟಪಟ್ಟು ಉಳಿಸಿ, ಆಕೆಗೆ ಇಷ್ಟವಾಗಬಹುದು ಎಂಬ ನಿರೀಕ್ಷೆಯಿಂದ ಒಂದು ವಾಚ್ ಗಿಫ್ಟ್ ಆಗಿ ಖರೀದಿಸಿದ್ದ.
ಆದರೆ, ಆ ಉಡುಗೊರೆಯನ್ನು ಸ್ವೀಕರಿಸಿದ ಆತನ ಪ್ರಿಯತಮೆ, ಅದರ ಬ್ರಾಂಡ್ ಮತ್ತು ಬೆಲೆಯನ್ನು ನೋಡಿ “ಇಷ್ಟು ಚೀಪ್ ಗಿಫ್ಟ್ ತಂದಿದ್ದೀಯಾ?” ಎಂದು ಹಗುರವಾಗಿ ಮಾತನಾಡಿದ್ದಲ್ಲದೆ, ಆ ವಾಚ್ ಅನ್ನು ಎಲ್ಲರೆದುರೇ ಕಸದ ಬುಟ್ಟಿಗೆ ಎಸೆದಿದ್ದಾಳೆ. ಅಷ್ಟಕ್ಕೇ ನಿಲ್ಲಿಸದೆ, ಅದನ್ನು ಹಾಸ್ಯ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ‘ರೀಲ್ಸ್’ ಮಾಡಿ ಪೋಸ್ಟ್ ಮಾಡಿ ದ್ದಾಳೆ. ಮಗನ ಕೃತ್ಯ ತಿಳಿದು ಸಿಟ್ಟಿಗೆದ್ದ ತಂದೆ-ತಾಯಿ ಸೇರಿಕೊಂಡು ಮನೆಯಲ್ಲಿ ಚೆನ್ನಾಗಿಯೇ ಬೆಂಡೆತ್ತಿದ್ದಾರೆ. ಈ ದೃಶ್ಯ ನೋಡಿದ ನೆಟ್ಟಿಗರು ಸರಿಯಾಗೇ ಮಾಡಿದ್ದಾರೆ ಎಂದಿದ್ದಾರೆ.




