ಸೋಮವಾರ, 26 ಅಕ್ಟೋಬರ್ 2026
Trending

ಎಸ್‌ಬಿಐ ಬ್ಯಾಂಕ್‌ ಮ್ಯಾನೇಜರ್‌ ಕೆನ್ನೆಗೆ ಬಾರಿಸಿದ ಎಂ.ಕೆ.ಸ್ಟಾಲಿನ್‌ ಸಹೋದರ ಪುತ್ರಿ! ವಿಡಿಯೋ ವೈರಲ್

ಚೆನ್ನೈ: ಮಾಜಿ ಕೇಂದ್ರ ಸಚಿವ ಎಂ.ಕೆ.ಅಳಗಿರಿ ಪುತ್ರಿ ಕಯಲ್ವಿಜಿ ಬ್ಯಾಂಕ್‌ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿದ ಆರೋಪದಲ್ಲಿ ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Sponsored

ಚೆನ್ನೈನ ಅಡ್ಯಾರ್‌ನಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯಲ್ಲಿ ಈ ಘಟನೆ ನಡೆದಿದ್ದು, ಬ್ಯಾಂಕ್‌ ಕಚೇರಿ ಇರುವ ವಾಣಿಜ್ಯ ಕಟ್ಟಡದ ಮಾಲೀಕರು ಕಯಲ್ವಿಜಿ ಆಗಿದ್ದಾರೆ. ಕಳೆದ ಕೆಲವು ದಿನಗಳಿಂದ ಕಟ್ಟಡದ ಲಿಫ್ಟ್‌ ಕೆಟ್ಟು ಹೋಗಿತ್ತು. ಇದನ್ನು ದುರಸ್ತಿ ಮಾಡುವಂತೆ ಬ್ಯಾಂಕ್‌ ಮ್ಯಾನೇಜರ್‌ ಕಯಲ್ವಿಜಿ ಅವರಿಗೆ ವಿನಂತಿ ಮಾಡಿದ್ದರು. ಈ ವಿಚಾರಕ್ಕೆ ಕುರಿತಂತೆ ಮಾತನಾಡಲು ಬಂದಿದ್ದ ಕಯಲ್ವಿಜಿ ಮತ್ತು ಬ್ಯಾಂಕ್‌ ಮ್ಯಾನೇಜರ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಚರ್ಚೆ ತಾರಕಕ್ಕೇರಿದಾಗ ಕಯಲ್ವಿಜಿ ದಿಢೀರನೆ ಎದ್ದು ನಿಂತು ಬ್ಯಾಂಕ್‌ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ.

Advertisement
Advertisement

ಮ್ಯಾನೇಜರ್‌ ನೀಡಿದ ದೂರಿನ ಪ್ರಕಾರ, ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರು ಪೊಲೀಸರಿಗೆ ಔಪಚಾರಿಕ ದೂರನ್ನು ನೀಡಿದ್ದಾರೆ. ಪೊಲೀಸರು ಕಯಲ್ವಿಜಿ ವಿರುದ್ಧ ನಾಲ್ಕು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಕಯಲ್ವಿಜಿ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರ ಸಹೋದರ ಎಂ.ಕೆ.ಅಳಗಿರಿ ಅವರ ಪುತ್ರಿಯಾಗಿದ್ದಾರೆ.

Advertisement