ಕರ್ಣ ಸೀರಿಯಲ್ ನಟ ಕಿರಣ್ ರಾಜ್ ಮೇಲೆ ಏಕಾಏಕಿ ಸಿಂಹ ದಾಳಿ
ಕನ್ನಡ ಕಿರುತೆರೆ ನಟ ಕಿರಣ್ ರಾಜ್ ಅವರ ಮೇಲೆ ಸಿಂಹ ಏಕಾಏಕಿ ದಾಳಿ ಮಾಡಿದೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲಾಗುತ್ತಿದೆ.
Sponsoredಸಿಂಹಕ್ಕೆ ತರಬೇತಿ ನೀಡುವುದನ್ನು ಕಲಿಯುವ ಮೊದಲ ದಿನ ಘಟನೆ ಸಂಭವಿಸಿದೆ. ಈ ಬಗ್ಗೆ ಖುದ್ದು ಕಿರಣ್ ರಾಜ್ ಅವರೇ ಸ್ಪಷ್ಟನೆ ಕೊಟ್ಟಿದ್ದು, ಸಿಂಹದ ಜೊತೆಗಿನ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೊ ಜೊತೆಗೆ ನಟ ಕಿರಣ್ ರಾಜ್ ಅವರು, ಸಿಂಹ ಪಳಗಿಸುವಿಕೆ ತರಬೇತಿಯಲ್ಲಿ ಭಾಗಿಯಾಗುವ ಮೊದಲು ಯಾವೆಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ‘ಸಿಂಹಗಳು ಯಾವಾಗಲೂ ಎದುರಾಳಿಯನ್ನು ಕೆಳಗೆ ಬೀಳಿಸಲು ಪ್ರಯತ್ನಿಸುತ್ತವೆ. ಆದ್ದರಿಂದ, ತರಬೇತಿಯ ಸಂದರ್ಭದಲ್ಲಿ ಆಸರೆಗಾಗಿ ಒರಗಿ ನಿಲ್ಲುವುದು ಅತ್ಯಗತ್ಯ’ ಎಂದಿದ್ದಾರೆ.
ಅಲ್ಲದೆ ‘ಸಿಂಹದ ಪಂಜರದಿಂದ ಅಥವಾ ಅದರ ಬಳಿಯಿಂದ ದೂರ ಸರಿಯುವಾಗಲೂ ಸಹ, ನಿಮ್ಮ ಮುಖವನ್ನು ಯಾವಾಗಲೂ ಸಿಂಹದ ಕಡೆಗೇ ಇರಿಸಬೇಕು. ಯಾವುದೇ ಕಾರಣಕ್ಕೂ ಅದಕ್ಕೆ ಬೆನ್ನು ತೋರಿಸಬಾರದು. ಸಿಂಹಗಳು ಒಮ್ಮೆ ನಿಮ್ಮೊಂದಿಗೆ ಪಳಗಿದರೆ, ಅವು ನಿಮ್ಮನ್ನು ಅಪ್ಪಿಕೊಳ್ಳಲು ಮತ್ತು ಮುದ್ದಾಡಲು ಹೆಚ್ಚು ಇಷ್ಟಪಡುತ್ತವೆ. ಚಿಂತೆ ಮಾಡಬೇಡಿ ಗೆಳೆಯರೇ, ಇದನ್ನು ಪೋಸ್ಟ್ ಮಾಡುತ್ತಿದ್ದೇನೆ ಎಂದರೆ ನಾನು ಚೆನ್ನಾಗಿದ್ದೇನೆ ಎಂದರ್ಥ’ ಎಂದು ತಮಾಷೆ ಮಾಡಿದ್ದಾರೆ. ಸದ್ಯ ಇದೇ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
https://www.instagram.com/p/DdA6r_ejlkH/?stkn=NTByY3h0YTI1em15




