ಸೋಮವಾರ, 26 ಅಕ್ಟೋಬರ್ 2026
Trending

LPG ಸಿಲಿಂಡರ್ ಪಡೆಯಲು ಅಡ್ಡದಾರಿ ಹಿಡಿದರೆ 7 ವರ್ಷ ಜೈಲು!!

LPG : ಭಾರತದದ್ಯಂತ ಎಲ್ಪಿಜಿ ಸಿಲಿಂಡರ್ ಗೆ ಭಾರಿ ಅಭಾವ ಉಂಟಾಗಿದೆ. ಸಿಲಿಂಡರ್ ಲಭ್ಯವಾಗದೆ ಅನೇಕರು ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದಾರೆ. ನಡುವೆ ಕೆಲವರು ಸ್ಟಾಕ್ ಇರುವ ಸಿಲಿಂಡರ್ ಅನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ನೀವೇನಾದರೂ ಹೀಗೆ ಸಿಲಿಂಡರ್ ಪಡೆಯಲು ಅಡ್ಡದಾರಿ ಹಿಡಿದರೆ ಅಥವಾ ಮಾರಾಟ ಮಾಡಿದರೆ ಏಳು ವರ್ಷ ಜೈಲು ಪಾಲಾಗಬೇಕಾಗುತ್ತದೆ.

Sponsored

ಹೌದು, ಹೋಟೆಲ್, ಬಾರ್‌, ರೆಸ್ಟೋ ರೆಂಟ್‌ಗಳು ಸೇರಿದಂತೆ ಇತರ ವಾಣಿಜ್ಯ ಸಂಸ್ಥೆಗಳು ಅಕ್ರಮವಾಗಿ ಗೃಹಬಳಕೆಯ ಸಿಲಿಂಡರ್‌ಗಳನ್ನು ಬಳಸಿದರೆ ಅಥವಾ ದಾಸ್ತಾನು ಮಾಡಿದರೆ ಏಳು ವರ್ಷ ಸಜೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿಅವಕಾಶವಿದೆ. ಅಂತಹ ಉಲ್ಲಂಘನೆ ಕೃತ್ಯಗಳು ಜಿಲ್ಲೆಯ ಯಾವುದೇ ಭಾಗದಲ್ಲಿ ಕಂಡುಬಂದರೆ, ಯಾವುದೇ ವ್ಯಕ್ತಿ, ಸಂಸ್ಥೆ ಗೃಹಬಳಕೆ ಅನಿಲ ಸಿಲಿಂಡರ್‌ಗಳನ್ನು ಒಂದೆಡೆ ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸಿದರೆ 1 ವರ್ಷದಿಂದ 7 ವರ್ಷದವರೆಗೂ ಜೈಲು ಶಿಕ್ಷೆಗೆ ಗುರಿಪಡಿಸುವ ಅವಕಾಶವೂ ಇದೆ. ಅಲ್ಲದೇ ಗ್ರಾಹಕರನ್ನು ಕಪ್ಪುಪಟ್ಟಿಗೆ ಸೇರಿಸಿ ಜೀವನ ಪರ್ಯಂತ ಗ್ಯಾಸ್‌ ಸಿಗದಂತೆ ಮಾಡುವ ಸಾಧ್ಯತೆ ಇದೆ.

ಹೀಗಾಗಿ ಅಡ್ಡ ದಾರಿಯಲ್ಲಿ ಸಿಲಿಂಡರ್ ಪಡೆಯುವುದು ಮಾರಾಟ ಮಾಡುವುದು ಮಾಡಿದರೆ ಎರಡು ವರ್ಷದ ಜೈಲು ಶಿಕ್ಷೆ ಅನುಭವಿಸಬೇಕಾದೀತು. ಆದ್ದರಿಂದ ನೀಮಾನುಸಾರವೇ ಸಿಲಿಂಡರ್ ಪಡೆಯುವುದು ಉತ್ತಮ