ಮುಂಬಯಿ: ನಗರದ ಒಂದು ಫುಟ್ ಪಾತ್ ಮೇಲಿದ್ದ ಮಂಚೂರಿಯನ್ ಅಂಗಡಿಯ ಕುದಿ ಎಣ್ಣೆಯ ಹೆಂಚಿಗೆ ಆಕಸ್ಮಿಕವಾಗಿ ಬಿದ್ದು ಐದು ವರ್ಷದ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಾಳೆ.
Sponsoredಪಾದಚಾರಿ ರಸ್ತೆಯಲ್ಲಿ ವ್ಯಾಪಾರಿಗಳು ಬೇಜವಾಬ್ದಾರಿತನದಿಂದ ಕುದಿಯುವ ಎಣ್ಣೆಯ ಕಬ್ಬಿಣದ ಕಡಾಯಿಯನ್ನು ಇಟ್ಟಿದ್ದರಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಬಾಲಕಿ ಮಂಚೂರಿಯನ್ ತರಲು ಹೋದಾಗ ಬಿದ್ದಿದ್ದು ಮಗಳ ಕಿರುಚಾಟ ಕೇಳಿ ಓಡಿಬಂದ ತಂದೆ ಸಾರ್ವಜನಿಕರ ಸಹಾಯದಿಂದ ಆಕೆಯನ್ನು ಎಣ್ಣೆ ಕಡಾಯಿಯಿಂದ ಹೊರಗೆಳೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.




