ರಾಜ್ಯದ ಜೈಲುಗಳಲ್ಲಿ ಕೈದಿಗಳು ಕದ್ದು ಮೊಬೈಲ್ ಬಳಕೆ ಮಾಡುವುದಕ್ಕೆ ಕಡಿವಾಣ ಹಾಕಲು ವರ್ಷದಿಂದ ವರ್ಷಕ್ಕೆ ಕಠಿಣ ನಿಯಮಗಳನ್ನು ರೂಪಿಸಲಾಗುತ್ತಿದ್ದರೂ ಅದು ನಿಯಂತ್ರಣಕ್ಕೆ ಬರುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ರಾಜ್ಯದಲ್ಲಿ 9 ತಿಂಗಳ ಅವಧಿಯಲ್ಲಿ ಜೈಲುಗಳಲ್ಲಿ 410 ಮೊಬೈಲ್‌ಗಳು ಪತ್ತೆಯಾಗಿವೆ.
ಸದ್ಯ ಅನೇಕ ತಿಂಗಳಿಂದ ಜೈಲುಗಳಲ್ಲಿ ಮೊಬೈಲ್ ಎಂಟ್ರಿಗೆ ಫುಲ್ ಸ್ಟಾಫ್ ಹಾಕಲಾಗಿದೆ. ವರ್ಷದ ಹಿಂದೆ ಬಂದಿರುವ ಮೊಬೈಲ್‌ಗಳಷ್ಟೇ ಬಳಕೆಯಾಗಿವೆ. ಜೈಲು ಅಧಿಕಾರಿಗಳು ಆ ಮೊಬೈಲ್‌ಗಳನ್ನೂ ಪತ್ತೆ ಮಾಡಿದ್ದಾರೆ. ಕಳೆದ 9 ತಿಂಗಳಲ್ಲಿ ಬರೋಬ್ಬರಿ 410 ಮೊಬೈಲ್ ಪತ್ತೆಯಾಗಿದ್ದು, ಅದರಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲೇ 334 ಮೊಬೈಲ್ ಸೀಜ್ ಮಾಡಲಾಗಿದೆ.
ಅಲೋಕ್ ಕುಮಾರ್ ಅವಧಿಯಲ್ಲಿ ಹೆಚ್ಚು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ 6-7 ಮೊಬೈಲ್ ಅಷ್ಟೇ ಜೈಲಿನಲ್ಲಿ ಇರೋ ಸಾಧ್ಯತೆ ಇದೆ. 2025 ರ ಏಪ್ರಿಲ್‌ನಲ್ಲಿ ಪ್ರಜ್ವಲ್ ರೇವಣ್ಣ ಸೇಲ್‌ಗೆ ಮೊಬೈಲ್ ಸಪ್ಲೈ ಆಗಿದೆ. ಒಟ್ಟಾರೆ ವರ್ಷದಿಂದ ವರ್ಷಕ್ಕೆ ಮೊಬೈಲ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಸೀಜ್ ಆಗಿವೆ.



