ಶನಿವಾರ, 24 ಅಕ್ಟೋಬರ್ 2026

ಪುತ್ತೂರು: ಅನಾರೋಗ್ಯದಿಂದ ಯುವಕ ಸಾವು

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅನಾರೋಗ್ಯದಿಂದ ಯುವಕನೋರ್ವ ಮೃತಪಟ್ಟಿದ್ದಾನೆ.

ಮೃತ ಯುವಕನನ್ನು ಕೆಯ್ಯೂರು ಗ್ರಾಮದ ನೂಜಿ ನಿವಾಸಿ ಭವಿತ್ ಪಕ್ಕಳ(22) ಎಂದು ಗುರುತಿಸಲಾಗಿದೆ.

ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಭವಿತ್ ಅವರು ಇಂದು ಮೃತರಾಗಿದ್ದಾರೆ. ಅವರು ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.