ಶನಿವಾರ, 24 ಅಕ್ಟೋಬರ್ 2026

Sunny Beaches: ಕರ್ನಾಟಕದ ಮದ್ಯ ಮಾರುಕಟ್ಟೆಗೆ ‘ಸನ್ನಿ ಬೀಚಸ್’ ಹೊಸ ಬಿಯರ್ ಎಂಟ್ರಿ – ಬೆಲೆ, ಸ್ಪೆಷಾಲಿಟಿ ಕೇಳಿದ್ರೆ ಫುಲ್ ಖುಷ್ ಆಗ್ತೀರಾ!!

Sunny Beaches: ಮದ್ಯದ ದರ ನಿರಂತರವಾಗಿ ಏರಿಕೆ ಕಾಣುತ್ತಾ ಮದ್ಯಪ್ರಿಯರು ಅಘಾತಕ್ಕೆ ಒಳಗಾಗಿರುವ ನಡುವೆ ಇದೀಗ ರಾಜ್ಯದ ಮದ್ಯ ಮಾರುಕಟ್ಟೆಯಲ್ಲಿ ಹೊಸ ಅಲೆಯೊಂದು ಎದ್ದಿದೆ. ವಿನೂತನ ತಂತ್ರಜ್ಞಾನ ಹಾಗೂ ಕೈಗೆಟುಕುವ ದರದೊಂದಿಗೆ ‘ಸನ್ನಿ ಬೀಚಸ್’ (Sunny Beaches) ಹೊಸ ಬಿಯರ್, ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಎಂಟ್ರಿ ಕೊಡುವುದು ಮಾತ್ರವಲ್ಲ ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಮದ್ಯಪ್ರಿಯರ ಮನಗೆದ್ದು ಭಾರಿ ಸಂಚಲನ ಮೂಡಿಸಿ ಮದ್ಯ ಪ್ರಿಯರ ಕಿಕ್ ಏರಿಸುತ್ತಿದೆ.

ಕರ್ನಾಟಕದ ಸನ್ನಿ ಬೀಚಸ್ ಬಿಯರ್‌ ಬ್ರ್ಯಾಂಡ್:

ಸನ್ನಿ ಬೀಚಸ್ ಬ್ರ್ಯಾಂಡ್ ಫೆಬ್ರವರಿ 2026 ರಲ್ಲಿ ಮಾತ್ರ 12 ಲಕ್ಷಕ್ಕೂ ಹೆಚ್ಚು ಬಾಟಲಿಗಳ ಮಾರಾಟವನ್ನು ವರದಿ ಮಾಡಿದೆ, ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಬೆಳಗಾವಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಲಭ್ಯತೆ ಮತ್ತು ವ್ಯಾಪಕ ವ್ಯಾಪ್ತಿಯೊಂದಿಗೆ ತನ್ನದೇ ಆದ ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ. ಕಂಪನಿಯು ಬಿಡುಗಡೆಯಾದಾಗಿನಿಂದ 1 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ಈ ಉತ್ಪನ್ನವನ್ನು ಪ್ರಯತ್ನಿಸಿದ್ದಾರೆ ಎಂದು ಅಂದಾಜಿಸಿದೆ.

ಬೆಲೆ ಎಷ್ಟು?

ಸನ್ನಿ ಬೀಚಸ್ ಬಿಯರ್‌ ಬೆಲೆ ಕೇಳಿದ್ರೆ ಪಕ್ಕಾ ಶಾಕ್‌ ಆಗ್ತೀರಾ. ಯಾಕೆಂದ್ರೆ ಸನ್ನಿ ಬೀಚಸ್ ಬಿಯರ್‌ 650 ಮಿಲಿ ಬಾಟಲಿಗೆ ಸುಮಾರು 105 ರೂ. ಆಗಿದೆ. ಅದರಂತೆ ಸನ್ನಿ ಬೀಚಸ್ ಬಿಯರ್‌ 500 ಮಿಲಿ ಕ್ಯಾನ್‌ಗೆ 90 ರೂ. ಮತ್ತು 330 ಮಿಲಿ ಪಿಂಟ್‌ಗೆ 65 ರೂ.ಗಳಲ್ಲಿ ಲಭ್ಯವಿದೆ. ಇತ್ತೀಚೆಗೆ ಬಿಡುಗಡೆಯಾದ ಸನ್ನಿ ಬೀಚಸ್ ಸ್ಟ್ರಾಂಗ್ ಪ್ರೀಮಿಯಂ ಬಿಯರ್‌ನ ಬೆಲೆ 650 ಮಿಲಿ ಬಾಟಲಿಗೆ 105 ರೂ., 500 ಮಿಲಿ ಕ್ಯಾನ್‌ಗೆ 90 ರೂ. ಮತ್ತು 330 ಮಿಲಿ ಪಿಂಟ್‌ಗೆ 70 ರೂ.ಗಳಾಗಿದೆ.

ವ್ಯಾಪಕ ಲಭ್ಯತೆ:

ಈಗಾಗಲೇ ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಬೆಳಗಾವಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ಸುಮಾರು 8,000 ಮಳಿಗೆಗಳಲ್ಲಿ ಈ ಬಿಯರ್ ಲಭ್ಯವಿದೆ. ಬೇಸಿಗೆಯ ಹೊತ್ತಿಗೆ ಸುಮಾರು 12,000 ಮಳಿಗೆಗಳಿಗೆ ವಿಸ್ತರಿಸುವ ಗುರಿಯನ್ನು ಕಂಪನಿ ಹೊಂದಿದೆ.