IPL-2026 : ಟಿ20 ವಿಶ್ವಕಪ್ ಮುಗಿದ ಕೂಡಲೇ 2026 ರ ಐಪಿಎಲ್ ಕೂಡ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ಈ ಆವೃತ್ತಿಯಲ್ಲೂ ತನ್ನ ಟ್ರೋಫಿ ಉಳಿಸಿಕೊಳ್ಳುವ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ. ಇದೆಲ್ಲದರ ನಡುವೆ ಆರ್‌ಸಿಬಿ ಫ್ರಾಂಚೈಸಿ ಮುಂಬರುವ ಐಪಿಎಲ್ಗೆ ತನ್ನ ತಂಡದ ನೂತನ ಜೆರ್ಸಿಯನ್ನು ಬಿಡುಗಡೆ ಮಾಡಿದೆ.
Sponsoredಈ ಬಾರಿ RCB ಆಟಗಾರರು ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹೊಸ ಲುಕ್ ಆರ್‌ಸಿಬಿಯ ಹೊಸ ಜೆರ್ಸಿಯಲ್ಲಿ ಪ್ರತಿಫಲಿಸುತ್ತದೆ. ಇದನ್ನು ಟೂರ್ನಮೆಂಟ್‌ಗೆ ಸುಮಾರು ಒಂದೂವರೆ ತಿಂಗಳ ಮೊದಲು ಬಿಡುಗಡೆ ಮಾಡಲಾಯಿತು. ಫೆಬ್ರವರಿ 3ರಂದು ಸಾಮಾಜಿಕ ಮಾಧ್ಯಮ ವೀಡಿಯೊ ಪೋಸ್ಟ್ ಮೂಲಕ ಆರ್‌ಸಿಬಿ ಜೆರ್ಸಿ ಅನಾವರಣ ಮಾಡಿದೆ.
Marriage AdSponsoredವಾಸ್ತವವಾಗಿ ಬಿಡುಗಡೆಯಾಗಿರುವ ನೂತನ ಜೆರ್ಸಿ ಹಳೆಯ ಜೆರ್ಸಿಯನ್ನೇ ಹೋಲುತ್ತದೆ. ಅಂದರೆ ಆರ್‌ಸಿಬಿ ಆಟಗಾರರು ತಮ್ಮ ಐಕಾನಿಕ್ ಕೆಂಪು, ಕಪ್ಪು ಮತ್ತು ಚಿನ್ನದ ಬಣ್ಣದ ಮಿಶ್ರಿತ ಜೆರ್ಸಿಯಲ್ಲೇ ಮಿಂಚಲಿದ್ದಾರೆ. ಆದರೆ ಈ ಬಾರಿ ಜೆರ್ಸಿಯಲ್ಲಿ ಕೆಲವು ಬದಲಾವಣೆಗಳಿವೆ. ಕಳೆದ ಎರಡು ಅಥವಾ ಮೂರು ಸೀಸನ್‌ಗಳಿಗೆ ಮುಖ್ಯ ಪ್ರಾಯೋಜಕರಾಗಿದ್ದ ಕತಾರ್ ಏರ್‌ವೇಸ್ ಅನ್ನು ‘ನಥಿಂಗ್ ಸ್ಮಾರ್ಟ್‌ಫೋನ್‌ಗಳು’ ನಿಂದ ಬದಲಾಯಿಸಲಾಗಿದೆ. ಆದರೆ ಅತಿದೊಡ್ಡ ಬದಲಾವಣೆಯೆಂದರೆ ತಂಡದ ಲೋಗೋ, ಇದು ಅಭಿಮಾನಿಗಳನ್ನು ಸಂತೋಷಪಡಿಸಿದೆ.




