ಸೋಮವಾರ, 26 ಅಕ್ಟೋಬರ್ 2026
Trending

ದೆಹಲಿ ಪ್ರವೇಶಿಸುವ ವಾಹನಗಳಿಗೆ ಹೊಸ ನಿಯಮ ಜಾರಿ

Old vehicle

ರಾಜಧಾನಿ ದೆಹಲಿಯಲ್ಲಿ ಚಳಿಗಾಲದ ಅವಧಿಯಲ್ಲಿ ಉಂಟಾಗುವ ವಾಯುಮಾಲಿನ್ಯವನ್ನು ನಿಯಂತ್ರಣ ಮಾಡಲು ದೆಹಲಿ ಸರಕಾರವು ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಹಾಗಾಗಿ ನ.1 ರಿಂದ ಜನವರಿ 31,2027 ರವರೆಗೆ ಹೊರ ರಾಜ್ಯಗಳಿಂದ ಬರುವ ಬಿಎಸ್‌-6 ಮಾನದಂಡ ಇಲ್ಲದ ವಾಹನಗಳ ಪ್ರವೇಶವನ್ನು ನಗರದಾದ್ಯಂತ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ.

Sponsored

ಗುರುಗ್ರಾಮ, ಫರೀದಾಬಾದ್‌, ನೋಯ್ಡಾ, ಗ್ರೇಟರ್‌ ನೋಯ್ಡಾ ಮತ್ತು ಗಾಜಿಯಾಬಾದ್‌ಗಳಲ್ಲಿ ಬಿಎಸ್-6 ಮಾನದಂಡಕ್ಕಿಂತ ಕೆಳಗಿರುವ 10 ಲಕ್ಷಕ್ಕೂ ಹೆಚ್ಚು ವಾಹನಗಳಿದೆ ಎಂದು ಅಂದಾಜಿಸಲಾಗಿದೆ.

Advertisement
Advertisement

ವಿನಾಯಿ ಯಾವ ವಾಹನಕ್ಕೆ?
ಸಿಎನ್‌ಜಿ ಮತ್ತು ವಿದ್ಯುತ್‌ ಚಾಲಿತ ವಾಹನಗಳಿಗೆ ಪ್ರವೇಶಕ್ಕೆ ವಿನಾಯಿತಿ ನೀಡಲಾಗಿದೆ.
ಆಂಬುಲೆನ್ಸ್‌, ಅಗ್ನಿಶಾಮಕ ವಾಹನಗಳು ಮತ್ತು ಅಗತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ವಾಹನಗಳಿಗೆ ನಿಷೇಧ ಅನ್ವಯವಿಲ್ಲ.
ಹೊರರಾಜ್ಯದ ಬಿಎಸ್‌-6 ಮಾನದಂಡ ಹೊಂದಿರುವ ವಾಹನಗಳು ಮುಕ್ತವಾಗಿ ಪ್ರವೇಶ ಮಾಡಬಹುದು.
ದೆಹಲಿ ನೋಂದಾಯಿತ ವಾಹನಗಳಿಗೆ ಈ ನಿರ್ದಿಷ್ಟ ಪ್ರವೇಶ ನಿಷೇಧ ನಿಯಮವು ಅನ್ವಯಿಸುವುದಿಲ್ಲವಾದರೂ, ದೆಹಲಿಯ ಇತರ ವಾಯು ಮಾಲಿನ್ಯ ನಿಯಂತ್ರಣ ಮತ್ತು ವಾಹನದ ವಿನಾಯಿತಿ ನಿಯಮಗಳು ಅವುಗಳಿಗೆ ಅನ್ವಯಿಸುತ್ತದೆ.

Advertisement