ಭಾನುವಾರ, 25 ಅಕ್ಟೋಬರ್ 2026
Trending

ಬೆಂಕಿ ಮಳೆಗೆ ಸುಟ್ಟು ಹೋದ ರೈಲ್ವೇ ಹಳಿ!!

ರೈಲ್ವೇ ಹಳಿ ಮುರಿದು ಬೀಳುವುದು ಕಡಿಮೆ ಎಂದೇ ಹೇಳಬಹುದು. ಆದರೆ, ಇಷ್ಟೊಂದು ಮಳೆಯ ನಡುವೆ ಇಲ್ಲೊಂದು ಕಡೆ ರೈಲು ಹಳಿಗಳಿಗೆ ಬೆಂಕಿ ಹತ್ತಿಕೊಂಡಿರುವ ಘಟನೆ ವರದಿಯಾಗಿದೆ. ಹೌದು. ಬೆಂಕಿ ಮಳೆಗೆ ರೈಲ್ವೇ ಹಳಿಯೇ ಸುಟ್ಟು ಹೋಗಿದೆ.

Sponsored

ಆದರೆ, ಇಲ್ಲಿ ಮಳೆಯ ಸುಳಿವೇ ಇಲ್ಲ. ಬದಲಿಗೆ ಸುಡು ಬಿಸಿಲು ಜನರನ್ನು ಬೆಂದು ಹೋಗುವಂತೆ ಆಗಿಸಿದೆ. ಬಿಸಿಲಿನ ಬೆಂಕಿಯ ತಾಪಮಾನವೇ ಹಳಿಗೆ ಬೆಂಕಿ ಹತ್ತಿಕೊಳ್ಳಲು ಕಾರಣವಾಗಿದೆ.

ವರದಿಯ ಪ್ರಕಾರ, ವಾಂಡ್ಸ್‌ವರ್ತ್ ರಸ್ತೆ ಮತ್ತು ಲಂಡನ್ ವಿಕ್ಟೋರಿಯಾ ನಡುವಿನ ರೈಲ್ವೆ ಹಳಿಯಲ್ಲಿ ಈ ಘಟನೆ ಜುಲೈ 11 ರಂದು ನಡೆದಿದ್ದು, ಸೌತ್ ಈಸ್ಟರ್ನ್ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಸ್ಟೀವ್ ವೈಟ್ ಅವರು ಟ್ವಿಟ್ಟರ್‌ನಲ್ಲಿ ಬೆಂಕಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಬೆಂಕಿಯ ಕುರಿತು ತಕ್ಷಣದ ಕ್ರಮ ಕೈಗೊಂಡಿದ್ದಕ್ಕಾಗಿ ರೈಲು ಕಂಪನಿ ಮತ್ತು ಲಂಡನ್ ಅಗ್ನಿಶಾಮಕ ದಳಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಪ್ರತಿಕ್ರಿಯೆಯಾಗಿ, ನೆಟ್‌ವರ್ಕ್ ರೈಲ್ ಸೌತ್‌ಈಸ್ಟ್ ಕೂಡ ಬೆಂಕಿಯ ಫೋಟೋವನ್ನು ಹಂಚಿಕೊಂಡಿದೆ, ಮುಂಬರುವ ವಾರದಲ್ಲಿ ಶಾಖವು “ಗಂಭೀರ ಸವಾಲಾಗಿದೆ” ಎಂದು ಅವರು ಒತ್ತಿಹೇಳಿದ್ದಾರೆ.

ಈ ಬೆಂಕಿ ರೈಲ್ವೇ ಹಳಿಯ ಮಧ್ಯದಲ್ಲಿರುವ ಮರದಿಂದ ತಗುಲಿದ್ದು, ಇದಾದ ನಂತರ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲುಗಳನ್ನು ಬೇರೆ ಮಾರ್ಗಕ್ಕೆ ತಿರುಗಿಸಲಾಗಿದೆ.ಇದಲ್ಲದೇ ಕಾರ್ಯಾಚರಣೆಗೆ ಫಿಟ್ ಲೈನ್ ಪಾಸ್ ಮಾಡಲಾಗಿದೆ ಎಂದು ರೈಲ್ವೆ ಭರವಸೆ ನೀಡಿದೆ. ಆದರೆ, ಬೆಂಕಿ ಹೊತ್ತಿಕೊಂಡ ಟ್ರ್ಯಾಕ್‌ಗಳನ್ನು ಬದಲಾಯಿಸಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅಲ್ಲದೆ ಮೂರನೇ ಹಂತದ ಶಾಖ-ಆರೋಗ್ಯ ಎಚ್ಚರಿಕೆಯನ್ನು ನೀಡಲಾಗಿದೆ. ಇದು ದಕ್ಷಿಣ, ಮಿಡ್‌ಲ್ಯಾಂಡ್ಸ್ ಮತ್ತು ಇಂಗ್ಲೆಂಡ್‌ನ ಪೂರ್ವದಾದ್ಯಂತ ವರದಿಯಾಗಿದೆ. ಶಾಖವನ್ನು ನಿಭಾಯಿಸಲು ಜನರು ಸಾಧ್ಯವಾದಷ್ಟು ಮನೆಯೊಳಗೆ ಇರಲು ಮತ್ತು ಸಾಕಷ್ಟು ನೀರು ಕುಡಿಯಲು ಅಧಿಕಾರಿಗಳು ಜನರಿಗೆ ಸಲಹೆ ನೀಡಿದರು. ಮುಂದಿನ ವಾರಾಂತ್ಯದವರೆಗೂ ಶಾಖ-ಆರೋಗ್ಯ ಎಚ್ಚರಿಕೆಯು ಜಾರಿಯಲ್ಲಿರುತ್ತದೆ ಎಂದು ಅವರು ಹೇಳಿದ್ದಾರೆ.