ಭಾನುವಾರ, 25 ಅಕ್ಟೋಬರ್ 2026
Trending

ಬೆಳ್ತಂಗಡಿ:ಕಾಸರಗೋಡಿನ ವ್ಯಕ್ತಿ ಉಜಿರೆ ಕಡೆ ಬಂದವರು ನಾಪತ್ತೆ

ಕಾಸರಗೋಡು:ಕೇರಳದ ವ್ಯಕ್ತಿಯೊಬ್ಬರು ಬೆಳ್ತಂಗಡಿ, ಉಜಿರೆಗೆ ಹೋಗಿ ಬರುತ್ತೇನೆಂದು ತೆರಳಿದವರು ಮರಳಿ ಮನೆಗೆ ಬಾರದೆ ನಾಪತ್ತೆಯಾದ ಘಟನೆ ನಡೆದಿದೆ.

Sponsored

ಕಾಣೆಯಾದ ವ್ಯಕ್ತಿ ಮೂಲತಃ ಕಾಸರಗೋಡಿನ ವಿಲ್ಸನ್(60) ಎಂದು ತಿಳಿದು ಬಂದಿದ್ದು,ಕಳೆದ ಮೂರು ದಿನಗಳ ಹಿಂದೆ ಕಾಸರಗೋಡಿನಿಂದ ಹೊರಟಿದ್ದು, ಇತ್ತ ಬೆಳ್ತಂಗಡಿಗೂ ಬಾರದೆ ನಾಪತ್ತೆಯಾಗಿದ್ದಾರೆ.

ಈ ವ್ಯಕ್ತಿಯ ಮನೆಯವರು ಇವರು ಉಜಿರೆ,ಧರ್ಮಸ್ಥಳ
ಕಡೆ ಇರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು ಸಾರ್ವಜನಿಕರು ಈ ವ್ಯಕ್ತಿ ಕಂಡು ಬಂದರೆ ತಕ್ಷಣ
ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಮನೆಯವರ
9847116660 ಈ ನಂಬರಿಗೆ ಕರೆ ಮಾಡಬೇಕಾಗಿ ಕೇಳಿ ಕೊಂಡಿದ್ದಾರೆ.ಈಗಾಗಲೇ ಕಾಸರಗೋಡಿನ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲೆಯಾಗಿದೆ ಎಂದು ತಿಳಿದು ಬಂದಿದೆ.