ಬೆಳ್ತಂಗಡಿ: ಶಿರ್ಲಾಲು ಗ್ರಾಮದಲ್ಲಿ ಸುರಿದ ಕೆಂಪು ಮಳೆ!
ಬೆಳ್ತಂಗಡಿ : ತಾಲೂಕಿನ ಶಿರ್ಲಾಲು ಗ್ರಾಮದ ವ್ಯಕ್ತಿಯೋರ್ವರ ಮನೆಯಲ್ಲಿ ಅಪರೂಪದ ವೈಚಿತ್ರ್ಯ ವೊಂದು ನಡೆದಿದೆ. ಅಲ್ಲಿ ಕೆಂಪು ಮಳೆಯಾದ ಘಟನೆ ನಡೆದಿದೆ. ಶಿರ್ಲಾಲು ಬಳ್ಳಿದಡ್ಡ ಮನೆಯ ಸೂರ್ಯನಾರಾಯಣ ಭಟ್ ಎಂಬುವವರ ಮನೆಯಲ್ಲಿ ಈ ವಿಚಿತ್ರ ರಕ್ತದ ಮಳೆ ಸುರಿದಿದ್ದು, ಸಾರ್ವಜನಿಕರಿಗೆ ಆತಂಕ ಉಂಟಾಗಿದೆ. ಮನೆಗೆ ಅಳವಡಿಸಲಾಗಿದ್ದ ಮೇಲ್ಟಾವಣಿಯಿಂದ ಹರಿದು ಬಂದ ಮಳೆ ನೀರು ಬಕೆಟ್, ಡ್ರಮ್ ಗಳಲ್ಲಿ ಶೇಖರಣೆಯಾಗಿದ್ದು, ಈ ನೀರು ಕೆಂಪು ಬಣ್ಣದಲ್ಲಿ ತುಂಬಿಕೊಂಡಿದೆ. ಈ ನೀರನ್ನು ಈಗಾಗಲೇ ಸಂಶೋಧನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಮನೆಯ …