ಬುಧವಾರ, 28 ಅಕ್ಟೋಬರ್ 2026
Trending

BECIL ನಲ್ಲಿ 378 ಅಸಿಸ್ಟಂಟ್, ಡಾಟಾ ಎಂಟ್ರಿ ಆಪರೇಟರ್ ಉದ್ಯೋಗ: ಪಿಯು, ಡಿಗ್ರಿ ಪಾಸಾಗಿದ್ರೆ ಅರ್ಜಿ ಸಲ್ಲಿಸಿ !

ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟಂಟ್ ಇಂಡಿಯಾ ಲಿಮಿಟೆಡ್ ( ಬಿಇಸಿಎಲ್) ದ್ವಿತೀಯ ಪಿಯುಸಿ ಪಾಸಾದ ಮತ್ತು ಡಿಗ್ರಿ ಪಾಸಾದ ಅಭ್ಯರ್ಥಿಗಳಿಗೆ ಭರ್ಜರಿ ಉದ್ಯೋಗ ಅವಕಾಶವನ್ನು ಇದೀಗ ನೀಡಿದೆ. ಒಟ್ಟು 378 ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ.

Sponsored

ಹುದ್ದೆಗಳ ವಿವರ, ಪ್ರಮುಖ ದಿನಾಂಕಗಳು, ಇತರೆ ಮಾಹಿತಿಗಳನ್ನು ಕೆಳಗಿನಂತೆ ನೀಡಲಾಗಿದೆ.

Advertisement
Advertisement

ಆಫೀಸ್ ಅಸಿಸ್ಟಂಟ್ – 200

ಡಾಟಾ ಎಂಟ್ರಿ ಆಪರೇಟರ್ -178

ಒಟ್ಟು ಹುದ್ದೆಗಳ ಸಂಖ್ಯೆ: 378

ವಿದ್ಯಾರ್ಹತೆ : ಆಫೀಸ್ ಅಸಿಸ್ಟಂಟ್ : ಯಾವುದೇ ಪದವಿ ಪಾಸ್.
ಡಾಟಾ ಎಂಟ್ರಿ ಆಪರೇಟರ್: ದ್ವಿತೀಯ ಪಿಯುಸಿ /12ನೇ ತರಗತಿ ತೇರ್ಗಡೆ ಹೊಂದಿರಬೇಕು.

ಆಯ್ಕೆ ವಿಧಾನ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಸಂದರ್ಶನ, ಗುಂಪು ಚರ್ಚೆ ನಡೆಸಿ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನವು ಇರಬೇಕು.

ಅರ್ಜಿ ಶುಲ್ಕ : ಸಾಮಾನ್ಯ / ಒಬಿಸಿ / EWS ಅಭ್ಯರ್ಥಿಗಳಿಗೆ ರೂ.750.
ಎಸ್ಸಿ / ಎಸ್ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.450/-

ಅಭ್ಯರ್ಥಿಗಳು ಶುಲ್ಕವನ್ನು ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್‌ಬ್ಯಾಂಕಿಂಗ್ / ಯುಪಿಐ ಮಾದರಿಯಲ್ಲಿ ಪಾವತಿ ಮಾಡಬಹುದು.

ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ : 07-04-2022

ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-04-2022

ವಯೋಮಿತಿ : ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ, ಗರಿಷ್ಠ 45 ವರ್ಷ ನಿಗದಿಪಡಿಸಲಾಗಿದೆ. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಈ ಮೇಲಿನ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಿದ್ದು, ಇತರೆ ಹೆಚ್ಚಿನ ಮಾಹಿತಿಗಳಿಗೆ ಈ ನೋಟಿಫಿಕೇಶನ್ ಓದಿ.

Advertisement