ಸೋಮವಾರ, 26 ಅಕ್ಟೋಬರ್ 2026
Trending

US: ನಾಳೆಯಿಂದ ಅಮೆರಿಕ ಸುಂಕ ಸಂಗ್ರಹ ಸ್ಟಾಪ್ – ‘ದೊಡ್ಡಣ್ಣ’ನಿಗೆ ಎಷ್ಟು ನಷ್ಟ?

US: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳ ಸರಕುಗಳ ಮೇಲೆ ವಿಧಿಸಿದ್ದ ಭಾರಿ ಸುಂಕಗಳನ್ನು ಶುಕ್ರವಾರ ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಮಹತ್ವದ ಆದೇಶವನ್ನು ಹೊರಡಿಸಿದೆ. ಆದರೆ ಸುಂಕಗಳನ್ನು ಅಸಂವಿಧಾನಿಕ ಎಂದು ಘೋಷಿಸಿ, ಅದನ್ನು ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಅಂದರೆ ಮಂಗಳವಾರದಿಂದ ಅಮೆರಿಕಾ ಸುಂಕ ಸಂಗ್ರಹಿಸುವುದನ್ನು ಸ್ಟಾಪ್ ಮಾಡಲಿದೆ.

Sponsored

1977 ರ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (IEEPA) ದುರುಪಯೋಗಪಡಿಸಿಕೊಂಡು ಟ್ರಂಪ್‌ ವಿಧಿಸಿದ್ದ ಆಮದು ಸುಂಕ ಸಂಗ್ರಹ ಮಂಗಳವಾರ ಬೆಳಗ್ಗೆ 10:30 ರಿಂದ (ಅಮೆರಿಕ ಕಾಲಮಾನ ಬೆಳಗ್ಗೆ 12.01 ರಿಂದ) ಸ್ಥಗಿತಗೊಳ್ಳಲಿವೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದು ಕೋರ್ಟ್‌ ತೀರ್ಪು ಐಇಇಪಿಎ ಅಡಿಯಲ್ಲಿ ವಿಧಿಸಲಾದ ಸುಂಕಗಳಿಗೆ ಮಾತ್ರ ಅನ್ವಯಿಸುತ್ತದೆ.

ಅಮೇರಿಕಾಗೆ ಎಷ್ಟು ನಷ್ಟ?

ಅಮೆರಿಕದ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಿಂದ ಅಮೆರಿಕಕ್ಕೆ ಸುಮಾರು 175 ಶತಕೋಟಿ ಡಾಲರ್‌ನಷ್ಟು ಆದಾಯ ಲಾಸ್‌ ಆಗುವ ಆತಂಕ ಎದುರಾಗಿದೆ. ಇಷ್ಟು ದೊಡ್ಡ ಮೊತ್ತವನ್ನು ಅಮೆರಿಕ ಮರುಪಾವತಿ ಮಾಡುವ ಅಪಾಯಕ್ಕೆ ಸಿಲುಕಬಹುದು. ಈ ಸುಂಕಗಳು ಪ್ರತಿದಿನ 500 ದಶಲಕ್ಷ ಡಾಲರ್‌ಗಿಂತಲೂ ಹೆಚ್ಚು ಆದಾಯ ತರುತ್ತಿದ್ದವು ಎಂದು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ.