ಭಾನುವಾರ, 25 ಅಕ್ಟೋಬರ್ 2026
Trending

Iran: ಬೈ ಮಿಸ್ಟೇಕ್ ಆಗಿ ಬಾಂಬ್ ಹಾಕಿದ್ವಿ, ಪ್ಲೀಸ್ ಬೇಜಾರ್ ಮಾಡ್ಕೋಬೇಡಿ – ನೆರೆಯ ರಾಷ್ಟ್ರಗಳಿಗೆ ಇರಾನ್ ಕ್ಷಮೆ

Iran: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ತೀವ್ರವಾದ ದಾಳಿ ನಡೆಸಿದೆ. ಇದಕ್ಕೆ ಪ್ರತಿಕಾರವಾಗಿ ಇರಾನ್ ಕೂಡ ದಾಳಿ ಮಾಡಿದ್ದು, ಈ ಸಮಯದಲ್ಲಿ ನೆರೆಯ ರಾಷ್ಟ್ರಗಳಿಗೂ ಕೂಡ ಹಾನಿ ಉಂಟಾಗಿದೆ. ಈಗ ಇರಾನ್, ‘ಬೈ ಮಿಸ್ಟೇಕ್ ಆಗಿ ಬಾಂಬ್ ಹಾಕಿದ್ವಿ ಪ್ಲೀಸ್ ಬೇಜಾರ್ ಮಾಡ್ಕೋಬೇಡಿ’ ಎಂದು ನೆರೆಯ ರಾಷ್ಟ್ರಗಳಲ್ಲಿ ಕ್ಷಮೆಯಾಚಿಸಿದೆ.

Sponsored

ಯಸ್, ಇರಾನ್ (Iran) ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ (Masoud Pezeshkian) ತಮ್ಮ ನೆರೆಯ ರಾಷ್ಟ್ರಗಳಲ್ಲಿ “ಯುದ್ಧದಲ್ಲಿ ದಾಳಿಗೊಳಗಾಗಿರುವ ನೆರೆಯ ರಾಷ್ಟ್ರಗಳಿಗೆ ನಾನು ಕ್ಷಮೆಯಾಚಿಸುತ್ತೇನೆ. ನೆರೆಯ ರಾಷ್ಟ್ರಗಳ ಮೇಲೆ ಇನ್ನು ಮುಂದೆ ಯಾವುದೇ ದಾಳಿ ನಡೆಸಲಾಗುವುದಿಲ್ಲ. ಇರಾನ್ ಮೇಲೆ ಯಾವ ದೇಶ ದಾಳಿ ಮಾಡುತ್ತದೋ ಆ ದೇಶಗಳ ಮೇಲಷ್ಟೇ ನಾವು ಪ್ರತಿದಾಳಿ ನಡೆಸುತ್ತೇವೆ. ಬದಲಿಗೆ ಇತರ ದೇಶಗಳ ಮೇಲೆ ನಾವು ಕ್ಷಿಪಣಿಗಳನ್ನು ಹಾರಿಸುವುದಿಲ್ಲ” ಎಂದು ಭರವಸೆ ನೀಡಿದ್ದಾರೆ.

ಇಸ್ರೇಲ್‌ ಹಾಗೂ ಅಮೆರಿಕದೊಂದಿಗಿನ ಯುದ್ಧದಲ್ಲಿ ತಾನು ಯಾವುದೇ ಕಾರಣಕ್ಕೂ ಶರಣಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಶತ್ರುಗಳು ಇರಾನ್ ಜನರ ಶರಣಾಗತಿಯ ಆಶಯವನ್ನು ಅವರು ಸಮಾಧಿ ಮಾಡಬೇಕಷ್ಟೇ. ಬದಲಿಗೆ ನಾವು ಎಂದೂ ಶರಣಾಗಲ್ಲ ಎಂದು ಅವರು ಖಡಕ್ಕಾಗಿ ಉತ್ತರಿಸಿದ್ದಾರೆ.