ಭಾನುವಾರ, 25 ಅಕ್ಟೋಬರ್ 2026
Trending

ಕಡಬ: ನರ್ಸಿಂಗ್‌ ವಿದ್ಯಾರ್ಥಿನಿ ಆತ್ಮಹತ್ಯೆ

ಕಡಬ: ವೈಯಕ್ತಿಕ ಕಾರಣಗಳಿಂದ ಮನನೊಂದು ನರ್ಸಿಂಗ್‌ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

Sponsored

ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಲಾರೆನ್ಸ್‌ ಎನ್ನುವವರ ಪುತ್ರಿ ಸ್ವೀಟಿ (18ವ) ಮೃತಪಟ್ಟ ವಿದ್ಯಾರ್ಥಿನಿ.

ಉಡುಪಿಯ ಖಾಸಗಿ ಕಾಲೇಜೊಂದರಲ್ಲಿ ನರ್ಸಿಂಗ್‌ ಓದುತ್ತಿದ್ದ ಈಕೆ ಕಾಲೇಜಿನ ವಸತಿ ನಿಲಯದಲ್ಲಿಯೇ ವಾಸ್ತವ್ಯವಿದ್ದು, ಫೆ.25 ರಂದು ರಾತ್ರಿ ತರಗತಿ ಮುಗಿಸಿ ವಸತಿ ನಿಲಯಕ್ಕೆ ಮರಳಿದ್ದರು. ಅಲ್ಲಿಯೇ ಇಲಿ ಪಾಷಾಣ ಸೇವಿಸಿದ್ದು, ವಿಷಯ ತಿಳಿದ ಸಹಪಾಠಿಗಳು ಮತ್ತು ಕಾಲೇಜು ಮಂಡಳಿಯವರು ಕೂಡಲೇ ವಿದ್ಯಾರ್ಥಿನಿಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು.

ಆದರೆ ಆಕೆಯ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಕೆಲವು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ವರದಿಯಾಗಿದೆ.