ಸೋಮವಾರ, 26 ಅಕ್ಟೋಬರ್ 2026
Trending

Petrol Price : ಏರಿದ ಪೆಟ್ರೋಲ್, ಡೀಸೆಲ್ ದರ – ಒಂದಲ್ಲ, ಎರಡಲ್ಲ ಬರೋಬ್ಬರಿ 55 ರೂ ಏರಿಕೆ

Petrol Price : ಮಧ್ಯಪ್ರಾಚ್ಯದಲ್ಲಿ ನಿರ್ಮಾಣವಾಗಿರುವ ಯುದ್ಧ ವಾತಾವರಣದಿಂದಾಗಿ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬಾರಿ ಏರಿಕೆಯಾಗಿದೆ. ಒಂದು ಲೀಟರ್ ಪೆಟ್ರೋಲ್ ಗೆ ಒಂದಲ್ಲ ಎರಡಲ್ಲ ಅನ್ನುವಂತೆ ಬರೋಬ್ಬರಿ 55 ರೂಪಾಯಿ ಏರಿಕೆ ಮಾಡಲಾಗಿದೆ. ಹಾಗಂತ ಇದು ನಮ್ಮ ಭಾರತದಲ್ಲಿ ಅಲ್ಲ. ನಮ್ಮ ಶತ್ರು ರಾಷ್ಟ್ರ ಎನಿಸಿಕೊಂಡಿರುವ ಪಾಕಿಸ್ತಾನದಲ್ಲಿ ಇಂತಹ ಸ್ಥಿತಿ ಎದುರಾಗಿದೆ.

Sponsored

ಯಸ್, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ಪ್ರತಿ ಲೀಟರ್‌ ಪೆಟ್ರೋಲ್, ಡೀಸೆಲ್ ಬೆಲೆಯನ್ನು 55 ಪಾಕಿಸ್ತಾನ ರೂಪಾಯಿ (PKR)ಏರಿಕೆ ಮಾಡಿದೆ. ಹೊಸ ಬೆಲೆಗಳ ಅನ್ವಯ ಪೆಟ್ರೋಲ್‌ ಬೆಲೆ 321.17 ರೂ. ಆಗಿದ್ದರೆ ಡೀಸೆಲ್‌ ಬೆಲೆ 275.70 ರೂ.ನಿಂದ ರಿಂದ 335.86 ರೂ.ಗೆ ಏರಿಕೆಯಾಗಲಿದೆ.

ಇನ್ನೂ ದೇಶದಲ್ಲಿ ಇಂಧನ ಕೊರತೆಯಾಗಬಹುದು ಎಂಬ ಸುದ್ದಿ ಹಬ್ಬಿದ್ದರಿಂದ ಪಾಕಿಸ್ತಾನದಲ್ಲಿ ಈಗ ಪೆಟ್ರೋಲ್‌ ತುಂಬಿಸಲು ಬಂಕ್‌ಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದಾರೆ. ಈ ಕುರಿತಾದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.