Home » ಕಳ್ಳರ ಭಯ – ಕ್ರೇನ್ ಬಳಸಿ ಸ್ಕಾರ್ಪಿಯೋ ಕಾರನ್ನು ಮನೆ ಮೇಲೆ ಪಾರ್ಕ್ ಮಾಡೋ ಮಾಲೀಕ!!

ಕಳ್ಳರ ಭಯ – ಕ್ರೇನ್ ಬಳಸಿ ಸ್ಕಾರ್ಪಿಯೋ ಕಾರನ್ನು ಮನೆ ಮೇಲೆ ಪಾರ್ಕ್ ಮಾಡೋ ಮಾಲೀಕ!!

0 comments

ಕಾರು ಮಾಲೀಕರು ತಮ್ಮ ಪಾರ್ಕಿಂಗ್ ಸ್ಥಳದಲ್ಲಿ ಕಾರು ಪಾರ್ಕ್ ಮಾಡುವುದು ಸಾಮಾನ್ಯ. ಜಾಗ ಇಲ್ಲದವರು ಮನೆ ಮುಂದೆ, ರಸ್ತೆ, ಪಕ್ಕದ ಪಸ್ತೆ, ಮೈದಾನ ಸೇರಿದಂತೆ ಹಲವೆಡೆ ಪಾರ್ಕ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ಮಾಲೀಕ ತನ್ನ ಕಾರನ್ನು ಮನೆಯ ಮಹಡಿ ಮೇಲೆ ಪಾರ್ಕ್ ಮಾಡಿದ್ದಾನೆ. ಅದೂ ಕೂಡ ಕ್ರೇನ್ ಬಳಸಿ. ಇದಕ್ಕೆ ಆತ ಕೊಟ್ಟ ಕಾರಣ ನಿಜಕ್ಕೂ ಅಚ್ಚರಿಯಾಗಿದೆ.

ಬಿಹಾರದಲ್ಲಿ ಈ ವಿಚಿತ್ರ ಪಾರ್ಕಿಂಗ್ ಘಟನೆ ನಡೆದಿದ್ದು, ಇದೀಗ ಇಂಟರ್ನೆಟ್ ನಲ್ಲಿ ಕೋಲಾಹಲ ಸೃಷ್ಟಿಸಿದೆ. ದುಬಾರಿ ವೆಚ್ಚ ನೀಡಿ ಕ್ರೇನ್ ತರಿಸಿ ಮಹೀಂದ್ರ ಸ್ಕಾರ್ಪಿಯೋ ಮಾಲೀಕ ತನ್ನ ಕಾರನ್ನು ಮನೆಯ ಮೇಲ್ಗಡೆ ಪಾರ್ಕಿಂಗ್ ಮಾಡಿದ್ದಾನೆ. ಮನೆಯ ಮುಂಭಾಗದಲ್ಲಿ ಕಾರು ಪಾರ್ಕಿಂಗ್ ಸ್ಥಳ ಲಭ್ಯವಿದ್ದರೂ ಈತ ಕ್ರೇನ್ ಬಳಸಿ ಕಾರನ್ನು ಮನೆಯ ಮೇಲೆ ಪಾರ್ಕ್ ಮಾಡಿದ್ದು ಯಾಕೆ ಅನ್ನೋ ಪ್ರಶ್ನೆ ಹಲವರಲ್ಲಿ ಕಾಡಿದೆ. ಇದಕ್ಕೆ ಉತ್ತರವೂ ಸಿಕ್ಕಿದೆ. ಅದನ್ನು ಕೇಳಿ ಜನ ಒಂದು ಬಾರಿ ಯೋಚಿಸಿ ಸರಿಯಾದ ನಿರ್ಧಾರ ಎಂದಿದ್ದಾರೆ.

ಮನೆ ಮೇಲೆ ಪಾರ್ಕ್ ಮಾಡಲು ಕಾರಣ :

ಈ ಕಾರಿನ ಮಾಲೀಕನಿಗೆ ವಿದೇಶದಲ್ಲಿ ಉದ್ಯೋಗ ಸಿಕ್ಕಿದೆ. ಹೀಗಾಗಿ ಈತ ಯುಎಐಗೆ ತೆರಳಲು ಸಜ್ಜಾಗಿದ್ದ. ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾನೆ. ಆದರೆ ಯುಎಐಗೆ ತೆರಳುವ ದಿನಾಂಕ ಹತ್ತಿರಬರುತ್ತಿದ್ದಂತೆ ಈತನಿಗೆ ಚಿಂತೆ ಶುರುವಾಗಿದೆ. ತನ್ನ ಕಾರನ್ನು ಸುರಕ್ಷಿತವಾಗಿ ಹೇಗೆ ಇಡಲಿ ಎಂಬ ಚಿಂತೆ ಜೋರಾಗಿದೆ.

ಇಡೀ ಗ್ರಾಮದಲ್ಲಿ ಕಳ್ಳರ ಹಾವಳಿ ಹೆಚ್ಚು. ರಸ್ತೆ ಬದಿ ಕಾರು ಸೇರಿದಂತೆ ವಾಹನ ಪಾರ್ಕಿಂಗ್ ಮಾಡಿದರೆ ಬೆಳಗ್ಗೆ ಆಗುವಷ್ಟರಲ್ಲಿ ಚಕ್ರ ಇರಲ್ಲ, ಹೆಡ್‌ಲೈಟ್ ಸೇರಿದಂತೆ ಹಲವು ಬಿಡಿಭಾಗ ಇರಲಿಲ್ಲ. ಎರಡು ದಿನ ಪಾರ್ಕ್ ಮಾಡಿದರೆ ಕಾರೇ ಇರಲ್ಲ. ಹೀಗಿರುವಾಗ ಕೆಲ ತಿಂಗಳ ಕಾಲ ಯುಎಐಗೆ ಕೆಲಸಕ್ಕಾಗಿ ತೆರಳಿದರೆ ಮರಳಲು ಸಾಧ್ಯವಿಲ್ಲ. ಅಷ್ಟು ದಿನ ಕಾರು ಮನೆ ಮುಂದೆ ಪಾರ್ಕ್ ಮಾಡಿದರೆ ಕಳ್ಳತನವಾಗಬಹುದು ಎಂದು ಕ್ರೇನ್ ಬಳಸಿ ಮನೆಯ ಮೇಲ್ಬಾಗದಲ್ಲಿ ಕಾರು ಪಾರ್ಕಿಂಗ್ ಮಾಡಿದ್ದಾನೆ. ಇದಕ್ಕೆ ನೆಟ್ಟಿಗರು ಒಂದು ರೀತಿಯಲ್ಲಿ ನೀವು ಮಾಡಿರುವುದು ಸರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

You may also like