ಬಾಲಕಿಯೊಬ್ಬಳು ತನ್ನ ಮನೆಯೊಳಗೆ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
Sponsoredಶವವಾಗಿ ಪತ್ತೆಯಾಗಿರುವ ವಿದ್ಯಾರ್ಥಿನಿ ಖದೀಜಾ ರೆಹಶಾ (17) ಎಂದು ಗುರುತಿಸಲಾಗಿದೆ.
Marriage AdSponsoredಈ ಘಟನೆ ಕೋಯಿಕ್ಕೋಡ್ನ ಅಥೋಲಿಯಲ್ಲಿ ಇಂದು ಬೆಳಿಗ್ಗೆ ನಡೆದಿದ್ದು, ಬಾಲಕಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿಯಾಗಿದ್ದಾಳೆ.
ಈಕೆ ಅಥೋಲಿ ಪರಂಬತ್ ನ ಬಶೀರ್ ಎಂಬವರ ಮಗಳಾಗಿದ್ದು, ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮೃತದೇಹವನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದರೆ, ಆಕೆ ಮನೆಯೊಳಗೇನೆ ಶವವಾಗಿ ಪತ್ತೆಯಾಗಲು ಕಾರಣ ಏನು, ಹೇಗೆ ನಡೆಯಿತು, ಆತ್ಮಹತ್ಯೆಯೋ ಎಂಬುದರ ಬಗ್ಗೆ ತನಿಖೆ ಬಳಿಕ ತಿಳಿದು ಬರಬೇಕಿದೆ.




