ಭಾನುವಾರ, 25 ಅಕ್ಟೋಬರ್ 2026
Trending

Kaun Banega Karod pati: ಕೋಟಿ ಗೆಲ್ಲೋ ಅವಕಾಶ ಇದ್ರೂ ಅರ್ಧಕ್ಕೆ ಶೋ ಕ್ವಿಟ್ ಮಾಡಿದ ಸ್ಪರ್ಧಿ- ಕಾರಣ ಕೇಳಿ ಅಮಿತಾಭ್ ಬಚ್ಚನ್ ಭಾವುಕ

Kaun Banega Karod pati: ಇಡೀ ದೇಶಾದ್ಯಂತ ಹೆಸರು ಮಾಡಿರುವ ಹಿಂದಿಯ 'ಕೌನ್ ಬನೇಗಾ ಕರೋಡ್ಪತಿ'(Kaun Banega Karod pati) ಕಾರ್ಯಕ್ರಮದಲ್ಲಿ ಎಂದೂ ನಡೆಯದಂತಹ ಒಂದು ಅಚ್ಚರಿಯ ಘಟನೆ ನಡೆದಿದೆ.

Kaun Banega Karod pati: ಇಡೀ ದೇಶಾದ್ಯಂತ ಹೆಸರು ಮಾಡಿರುವ ಹಿಂದಿಯ ‘ಕೌನ್ ಬನೇಗಾ ಕರೋಡ್ಪತಿ'(Kaun Banega Karod pati) ಕಾರ್ಯಕ್ರಮದಲ್ಲಿ ಎಂದೂ ನಡೆಯದಂತಹ ಒಂದು ಅಚ್ಚರಿಯ ಘಟನೆ ನಡೆದಿದೆ. ಈ ಘಟನೆಯಿಂದ ಕಾರ್ಯಕ್ರಮವನ್ನು ನಡೆಸಿಕೊಡುವ ಅಮಿತಾಬ್ ಬಚ್ಚನ್ ಅವರೇ ಭಾವುಕರಾಗಿದ್ದಾರೆ. ಇದಕ್ಕೆ ಮೂಲ ಕಾರಣವೆಂದರೆ ಈ ಶೋ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಆ ವ್ಯಕ್ತಿ!!

Sponsored

ಯಸ್, ನೀರಜ್ ಸಕ್ಸೇನಾ ಎಂಬುವವರು ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರು ಹಾಟ್ ಸೀಟ್ ಅಲ್ಲಿ ಕೂಡ ಕುಳಿತು ಆಟವನ್ನು ತುಂಬಾ ಚೆನ್ನಾಗಿ ಆಡುತ್ತಿದ್ದರು. ಇವರು ಪಶ್ಚಿಮ ಬಂಗಾಳದ ವಿಶ್ವವಿದ್ಯಾಲಯವೊಂದರ ಉಪಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲಾ ಉತ್ತರಗಳಿಗೂ ಸಲೀಸಾಗಿಯೇ ಯಾವುದೇ ಲೈಫ್​ಲೈನ್​ ಸಹಾಯವಿಲ್ಲದೇ ಪಟ ಪಟ ಎಂದು ಉತ್ತರಿಸಿದರು. 3.20 ಲಕ್ಷ ರೂಪಾಯಿಗಳನ್ನು ಸುಲಭದಲ್ಲಿ ಗೆದ್ದರು. ಇವೆಲ್ಲಾ ಆಗುತ್ತಿದ್ದಂತೆಯೇ, 3.20 ಲಕ್ಷ ರೂಪಾಯಿ ಗಳಿಸಿದ ಬಳಿಕ ನೀರಜ್​ ಅವರು ನನ್ನೊಂದು ರಿಕ್ವೆಸ್ಟ್​ ಎಂದರು. ಅಮಿತಾಭ್​ ಅವರು ಏನು ಎಂದು ಪ್ರಶ್ನಿಸಿದಾಗ, ನಾನು ಇಲ್ಲಿಗೇ ಶೋ ಬಿಡುತ್ತೇನೆ ಎಂದರು.

ಅವರ ಬಳಿ ಲೈಫ್​ ಲೈನ್​ ಇನ್ನೂ ಇದ್ದವು. ಇನ್ನೂ ಕೋಟಿ ಕೋಟಿ ಗೆಲ್ಲುವ ಅವಕಾಶವಿತ್ತು. ಶೋ ಬಿಡುತ್ತೇನೆ ಎಂಬ ಮಾತು ಕೇಳುತ್ತಲೇ ಅಮಿತಾಭ್​ ಸೇರಿ ಎಲ್ಲರೂ ಆಶ್ಚರ್ಯಚಕಿತರಾದರು. ಕೊನೆಗೆ ಅವರು ನೀಡಿದ ಹೇಳಿಕೆ ಮಾತ್ರ ಎಲ್ಲರನ್ನೂ ಭಾವುಕರನ್ನಾಗಿಸಿತು. ಅವರು ಹೇಳಿದ್ದೇನೆಂದರೆ, ನನಗಿಂತ ತುಂಬಾ ಕಿರಿಯರಾಗಿರುವ ಸ್ಪರ್ಧಿಗಳು ಇಲ್ಲಿ ಕುಳಿತುಕೊಳ್ಳಲು ಕಾಯುತ್ತಿದ್ದಾರೆ. ಅವರೆಲ್ಲರೂ ನನಗಿಂತ ಕಿರಿಯರು. ನಾನು ಇಲ್ಲಿ ತುಂಬಾ ಹೊತ್ತು ಕುಳಿತುಕೊಂಡರೆ ಅವರಿಗೆ ಅವಕಾಶ ಸಿಗುವುದಿಲ್ಲ. 3.20 ಲಕ್ಷ ರೂಪಾಯಿ ಗೆದ್ದ ತೃಪ್ತಿ ನನಗೆ ಇದೆ. ಇಷ್ಟು ಸಾಕು. ಅವರಿಗೂ ಅವಕಾಶ ಸಿಗಲಿ ಎಂದು ಕೈಮುಗಿದರು. ಇಷ್ಟು ಹೇಳುತ್ತಿದ್ದಂತೆಯೇ ಅಮಿತಾಭ್​ ಅವರಿಗೆ ಮಾತೇ ಬರಲಿಲ್ಲ. ಅಲ್ಲಿದ್ದ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆಗಳ ಸುರಿಮಳೆಯನ್ನೇ ಸುರಿಸಿದರು.

ಅಲ್ಲದೆ ಖುದ್ದು ಅಮಿತಾಭ್​ ಅವರೇ ‘ಇದು ನನ್ನ ಜೀವನದಲ್ಲಿ ನಡೆದ ಮೊದಲ ಘಟನೆ. ಕೌನ್ ಬನೇಗಾ ಕರೋಡ್ ಪತಿಯ ಇತಿಹಾಸದಲ್ಲಿ ಇಂಥ ವ್ಯಕ್ತಿಯನ್ನು ನಾನು ಕಂಡೇ ಇಲ್ಲ. ಹಣ ಪಡೆಯುವ ಅವಕಾಶ ಇದ್ದರೂ ಬೇರೆಯವರಿಗಾಗಿ ಸೀಟು ಬಿಟ್ಟು ಕೊಡುವ ವ್ಯಕ್ತಿಯ ಬಗ್ಗೆ ಏನು ಹೇಳುವುದೋ ಗೊತ್ತಾಗುತ್ತಿಲ್ಲ ಎಂದು ಭಾವುಕರಾದರು.