ಭಾನುವಾರ, 25 ಅಕ್ಟೋಬರ್ 2026

ನಂದಿ ಹಿಲ್ಸ್ ಮಾನ್ಸೂನ್ ಮ್ಯಾರಥಾನ್‌ನಲ್ಲಿ ದುರಂತ – ಓಡುವಾಗಲೇ ಹೃದಯಾಘಾತಕ್ಕೆ ಕ್ರೀಡಾಪಟು ಬಲಿ

ವಿಶ್ವವಿಖ್ಯಾತ ನಂದಿಬೆಟ್ಟದ ತಪ್ಪಲಿನಲ್ಲಿ ರವಿವಾರ ನಡೆದ 2ನೇ ಆವೃತ್ತಿಯ ‘ನಂದಿ ಹಿಲ್ಸ್ ಮಾನ್ಸೂನ್ ಮ್ಯಾರಥಾನ್’ ಓಟದ ವೇಳೆ ಭಾರಿ ದುರಂತವೊಂದು ಸಂಭವಿಸಿದ್ದು, 31 ವರ್ಷದ ಕ್ರೀಡಾಪಟುವೊಬ್ಬರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

Sponsored

ಪಂಜಾಬ್ ಮೂಲದ ಅಮನ್ ದೀಪ್ ಸಿಂಗ್ ಜಗಡೆ (31) ಮೃತ ದುರ್ದೈವಿ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನ ಖಾಸಗಿ ಕಂಪನಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 21 ಕಿಲೋಮೀಟರ್ ಓಟದಲ್ಲಿ ಪಾಲ್ಗೊಂಡಿದ್ದ ಅಮನ್ ದೀಪ್, ನಂದಿಬೆಟ್ಟ ಹತ್ತುವ ವೇಳೆ ಏಕಾಏಕಿ ಕುಸಿದು ಬಿದ್ದರು. ಮ್ಯಾರಥಾನ್ ಆಯೋಜಕರು ತಕ್ಷಣ ಅವರನ್ನು ಮುದ್ದೇನಹಳ್ಳಿಯ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

Marriage AdMarriage AdSponsored

ಅಮನ್ ದೀಪ್ ಅವರು ಮ್ಯಾರಥಾನ್ ಓಟ ಆರಂಭಿಸುವ ಕೆಲವೇ ಗಂಟೆಗಳ ಮುನ್ನ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ “ದೇವರು ನನ್ನ ಜೊತೆ ಇದ್ದಾನೆ” (God is with me) ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಹಾಕಿದ ಕೆಲವೇ ಗಂಟೆಗಳಲ್ಲಿ ಅವರು ಕೊನೆಯುಸಿರೆಳೆದಿರುವುದು ಶಾಕಿಂಗ್ ಮೂಡಿಸಿದೆ. 4,500ಕ್ಕೂ ಹೆಚ್ಚು ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸಿದ್ದ ಈ ಮ್ಯಾರಥಾನ್‌ನಲ್ಲಿ ಸಂಭವಿಸಿದ ಈ ಅಕಾಲಿಕ ಸಾವು ಇಡೀ ರನ್ನಿಂಗ್ ಸಮುದಾಯ ಹಾಗೂ ಕ್ರೀಡಾಪ್ರೇಮಿಗಳಲ್ಲಿ ತೀವ್ರ ಆಘಾತ ಮತ್ತು ಶೋಕವನ್ನು ಉಂಟುಮಾಡಿದೆ.