ಶನಿವಾರ, 24 ಅಕ್ಟೋಬರ್ 2026

ಪುತ್ತೂರು : ‘ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್’ ಸಂಸ್ಥೆಯ ಮಾಲೀಕ ಮುಳಿಯ ಶ್ಯಾಮ ಭಟ್ ನಿಧನ

ಪುತ್ತೂರು: ರಾಜ್ಯದ್ಯಾ0ತ ಹೆಸರುವಾಸಿಯಾದ ‘ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್’ ಸಂಸ್ಥೆಯ ಮಾಲೀಕರಾದ ಮುಳಿಯ ಸಾರಾಫ ಶ್ಯಾಮ ಭಟ್ (81 ವರ್ಷ) ಅವರು ಅಕ್ಟೋಬರ್ 4ರಂದು ನಿಧನ ಹೊಂದಿದ್ದಾರೆ.

ಪುತ್ತೂರಿನ ಪಾಂಗಳಾಯಿಯಲ್ಲಿರುವ ಶ್ಯಾಮಲೋಚನಾ ನಿವಾಸದಲ್ಲಿ ಅಲ್ಪಕಾಲದ ಅಸೌಖ್ಯದಿಂದ ಅವರು ಕೊನೆಯುಸಿರೆಳೆದರು. ಚಿನ್ನಾಭರಣ, ಬೆಳ್ಳಿ ಮತ್ತು ವಜ್ರ ವ್ಯವಹಾರ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಮುಳಿಯ ಶ್ಯಾಮ ಭಟ್ ಅವರು ‘ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್’ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರು ಪುತ್ತೂರು, ಬೆಂಗಳೂರು, ಮಡಿಕೇರಿ, ಗೋಣಿಕೊಪ್ಪಲು ಹಾಗೂ ಬೆಳ್ತಂಗಡಿಯಲ್ಲಿ ಶೋರೂಮ್ ಹೊಂದಿ ರಾಜ್ಯದ್ಯಾ0ತ ಶೋ ರೂಮ್ ಹೊಂದಿದ್ದಾರೆ.

ಸಾಮಾಜಿಕ, ಸಾಹಿತ್ಯ ಕ್ಷೇತ್ರ ಮಾತ್ರವಲ್ಲದೇ ಧಾರ್ಮಿಕ ಕ್ಷೇತ್ರಗಳಿಗೆ ದಾನ ನೀಡುತ್ತಿದ್ದ ಅವರು ಕೊಡುಗೈ ದಾನಿ ಎಂದೇ ಪ್ರಸಿದ್ಧರಾಗಿದ್ದರು. ಅಕ್ಟೋಬ‌ರ್ 6ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಪುತ್ತೂರಿನ ಪಾಂಗಳಾಯಿ ಮನೆಯಲ್ಲಿ ಅಂತಿಮ ದರ್ಶನ ಮತ್ತು ಗೌರವ ಸಮರ್ಪಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.